ಮಂಗಳೂರು: ಉದ್ಯಮಿಯೋರ್ವರು ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿರುವ ಬಗ್ಗೆ ಪಾಂಡೆಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15 ದಿನಗಳ ಹಿಂದೆ ಸ್ನೇಹಿತರ ಬಳಿ ಯುವತಿಯ ನಂಬರ್ ಪಡೆದುಕೊಂಡಿದ್ದ ಉದ್ಯಮಿ ಯುವತಿಗೆ ಕರೆ ಮಾಡಿ ಕುಶಾಲನಗರದ ಸೈಟ್ ಬಗ್ಗೆ ವಿವರಿಸಿ ಖರೀದಿಸಲು ತಿಳಿಸಿದ್ದ. ಯುವತಿ ಅಲ್ಲಿಯೇ ಸ್ಥಳೀಯ ನಿವಾಸಿ ಆದ ಕಾರಣ ಜಾಗ ಖರೀದಿಸಲು ಒಲವು ತೋರಿದರು.
ಉದ್ಯಮಿ ರಶೀದ್ ಎಂಬಾತ ಜಾಗ ನೋಡಲು ನನ್ನ ಕಾರಿನಲ್ಲೆ ಬಾ ನಾನೇ ನಿನ್ನ ನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದಾಗ ಯುವತಿ ಒಪ್ಪಿಕೊಂಡುರು. ಹಾಗೇ ರಾತ್ರಿ 8 ಗಂಟೆ ಸುಮಾರಿಗೆ ವಿರಾಜಪೇಟೆ ತಲುಪಿದರು. ಯುವತಿ ಹೋಟೆಲ್ ನಲ್ಲಿ 2 ರೂಮ್ ಬುಕ್ ಮಾಡಿದರು ಇದನ್ನು ಪ್ರಶ್ನಿಸಿದ ರಶೀದ್ ಒಂದೇ ರೊಮ್ ನಲ್ಲಿ ಇರಬಹುದು ಅಲ್ಲಾ 2 ರೂಮ್ ಬುಕ್ ಮಾಡಿದ್ದು ಎಂದಾಗ ಗಾಬರಿಗೊಂಡ ಯುವತಿ ಅಲ್ಲಿಂದ ತೆರಲಿ ತಂಗಿಯ ಮನೆಯಲ್ಲಿ ಉಳಿದುಕೊಂಡರು.
ಮರುದಿನ ರಶೀದ್ ಕರೆ ಮಾಡಿ 12 ಗಂಟೆ ಗೆ ಸೈಟ್ ನೋಡಲು ಬಾ ಎಂದನು. ನಿನ್ನೆ ಒಂದೆ ರೂಮ್ ನಲ್ಲಿ ಇರಬಹುದು ಇತ್ತು ನಾನು ಏನೋ ನಿರೀಕ್ಷೆ ಮಾಡಿ ಇದ್ದೆ ಎಂದಾಗ ಯುವತಿ ನೀವು ಹೀಗೆ ಮಾತಾನಾಡುವುದು ಸರೀ ಅಲ್ಲ ನೀವು ವಯಸ್ಸಿನಲ್ಲಿ ನನ್ನ ತಂದೆ ಸಮಾನ ಎಂದಾಗ ತಪ್ಪಾಯಿತ್ತು ಸ್ವಾರಿ ಎಂದನು. ಮತ್ತೆ ಕಾರಿನಲ್ಲಿ ಸೈಟ್ ನೋಡಲು ಕಾರಿನಲ್ಲಿ ತೆರಲಿದಾಗ ದಾರಿ ಮಧ್ಯೆ ಕಾರು ನಿಲ್ಲಿಸಿ 1 ಲಕ್ಷ ನೋಟಿನ ಕಟ್ಟು ತೋರಿಸಿ ನನಗೆ ನೀನು ಬೇಕು, ನೀನು ನನ್ನ ಜೊತೆ ಸಹಕರಿಸಿದರೆ ಈ ಹಣ ನೀಡುತ್ತೇನೆ ಎಂದಾಗ ಯುವತಿ ವಿರೋಧಿಸಿದ ನಂತರವೂ ನೀನು ಸಹಕರಿಸಿದರೆ ಕುಶಾಲನಗರ ದಲ್ಲಿ ಇರುವ ತನ್ನ 2 ಪ್ಲಾಟ್ ಗಳನ್ನು ನೀನ್ನ ಹೇಸರಿಗೆ ಬರೆಯುತ್ತೆನೆ ಎಂದು ಆಫರ್ ಮೇಲೆ ಆಫರ್ ಕೊಟ್ಟು ಎದೆಗೆ ಕೈ ಹಾಕುತ್ತಾನೆ. ಇದಕ್ಕೆ ಆಕ್ರೋಶಗೊಂಡ ಯುವತಿ ಉದ್ಯಮಿಗೆ ಬೈದು ಭಯದಲ್ಲಿ ಬೋಬ್ಬೆ ಹಾಕಿದಳು.
ಆದುದರಿಂದ ನನಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿರುವ ಬಗ್ಗೆ ರಶೀದ್ ರವರ ವಿರುದ್ಧ ಸೂಕ್ತ ಕಾನೂನು ಕ್ರ ಮ ಜರುಗಿಸಿ, ನನಗೆ ನ್ಯಾಯ ಒದಗಿಸಬೇಕಾಗಿ ಪಾಂಡೆಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.