ಉಳ್ಳಾಲ : ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ಅವರ ಹೆಸರಿನಲ್ಲಿ ನಡೆಯುವ 22 ನೇ ಪಂಚವಾರ್ಷಿಕ ಹಾಗೂ 432 ನೇ ವಾರ್ಷಿಕ ಉಳ್ಳಾಲ ಉರೂಸ್ ನ ದಿನ ಈಗಾಗಲೇ ನಿಗದಿ ಮಾಡಲಾಗಿದೆ.
ಎಪ್ರಿಲ್ 24 ರಿಂದ ಮೇ 18 ವರೆಗೆ ಉರೂಸ್ ನಡೆಯಲಿದೆ. ಎಲ್ಲರೂ ಒಗ್ಗಟ್ಟಾಗಿ ಉರೂಸನ್ನು ಯಶಸ್ವಿಯಾಗಿ ನೆರವೇರಿಸಬೇಕೆಂದು ಎಂದು ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.
ಉಳ್ಳಾಲದಲ್ಲಿ ಧಾರ್ಮಿಕ ಶಿಕ್ಷಣ ರಂಗ ಅಭಿವೃದ್ಧಿ ಹೊಂದಲು ತಾಜುಲ್ ಉಲಮಾ ಅಬ್ದುಲ್ ರಹ್ಮಾನ್ ಕುಂಞಿ ಕೋಯ ತಂಙಳ್ ಕಾರಣರಾಗಿದ್ದಾರೆ. ಈ ಉರೂಸ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿ ನಡೆಯುತ್ತಿಲ್ಲ. ಇಲ್ಲಿ ಜಾತಿ ಧರ್ಮ ಇಲ್ಲ. ಎಲ್ಲಾ ಧರ್ಮದವರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಎಲ್ಲರ ಸಹಕಾರ ಅಗತ್ಯ ಇದೆ ಎಂದರು.