ನವದೆಹಲಿ : Women India Movement (WIM)ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ರವರು ದೇಶದಲ್ಲಿ ಹೆಚ್ಚುತ್ತಿರುವ ವ್ಯವಸ್ಥಿತ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವು ಇಂದು ದೇಶವನ್ನು ವಿಭಜಿಸುತ್ತಿದೆಯೆಂದು ತೀವ್ರ ಆತಂಕ ವ್ಯಕ್ತಪಡಿಸಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ದೇಶವು ಅವನತಿಯ ಗಂಭೀರ ಹಂತವನ್ನು ತಲುಪಿದೆ ಎಂದು ತಿಳಿಸಿದ್ದಾರೆ. “ನ್ಯಾಯಮೂರ್ತಿ ಭುಯಾನ್ ಅವರ ಹೇಳಿಕೆಗಳು ದಲಿತರು, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರನ್ನು ಮಾನವೀಯ ಗೌರವದೊಂದಿಗೆ ಬದುಕುವ ಹಕ್ಕಿನಿಂದ ವ್ಯವಸ್ಥಿತವಾಗಿ ವಂಚಿತರನ್ನಾಗಿಸುತ್ತಿರುವ ಕಳವಳಕಾರಿ ಷಡ್ಯಂತ್ರವನ್ನು ಬಹಿರಂಗಪಡಿಸುತ್ತವೆ,” ಎಂದು ಯಾಸ್ಮಿನ್ ಇಸ್ಲಾಂ ಹೇಳಿದರು.
ವಿಮೆನ್ ಇಂಡಿಯಾ ಮೂಮೆಂಟ್ ಹೇಳುವಂತೆ, ಬಿಜೆಪಿ ಸರ್ಕಾರವು ದೇಶವನ್ನು ಸರ್ವಾಧಿಕಾರಿ ಹಿಂದುತ್ವ ರಾಷ್ಟ್ರ ವನ್ನಾಗಿ ಮಾರ್ಪಡಿಸುವ ನಿರಂತರ ಪ್ರಯತ್ನದಿಂದಾಗಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಸುರಕ್ಷತೆಯನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಲಾಗುತ್ತಿದೆ.ಕಳೆದ ಎರಡು ದಶಕಗಳಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ದಲಿತರ ವಿರುದ್ಧದ ಇಂತಹ ವ್ಯವಸ್ಧಿತ ಬಹಿಷ್ಕಾರದ ವಾತಾವರಣವು ಭಾರತದ ಸಂವಿಧಾನಿಕ ಮೌಲ್ಯಗಳಿಗೆ ಉಂಟಾಗಿರುವ ಅತ್ಯಂತ ದೊಡ್ಡ ಬೆದರಿಕೆಯಾಗಿದೆ.
“ಇದೀಗ ಸಾಮಾನ್ಯ ನಾಗರಿಕರು ಎಚ್ಚರಗೊಳ್ಳಬೇಕಾದ ಸಮಯ ಬಂದಿದೆ,” ಎಂದು ಯಾಸ್ಮಿನ್ ಇಸ್ಲಾಂ ಮುಂದುವರಿಸಿದರು. “ನಮ್ಮ ದೇಶದ ಜಾತ್ಯಾತೀತ ಸೌಹಾರ್ದತೆ ಮತ್ತು ಏಕತೆಯ ಪರಂಪರೆಗೆ ಕುತ್ತು ಬಂದಿರುವಾಗ ನಾವು ಮೌನವಾಗಿರಲು ಸಾಧ್ಯವಿಲ್ಲ. ನಮಗೆ ಭರವಸೆ ನೀಡಲಾದ ಸಮಗ್ರ ಭಾರತವನ್ನು ಉಳಿಸಲು ಪ್ರತಿಯೊಬ್ಬರೂ ಎದ್ದು ನಿಲ್ಲಬೇಕು.”
ಸರ್ಕಾರಿ ಪ್ರಾಯೋಜಿತ ತಾರತಮ್ಯ ಮತ್ತು ಕಡೆಗಣಿಸುವಿಕೆಯನ್ನು ತಕ್ಷಣ ನಿಲ್ಲಿಸಲು ಆಗ್ರಹಿಸಿ, ಬಹುಸಂಖ್ಯಾತ ತುಷ್ಟೀಕರಣದ ಅಜೆಂಡಾವನ್ನು ಕಿತ್ತೊಗೆದು ಸಂವಿಧಾನಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಬೆಂಬಲಿಸಬೇಕೆಂದು ಎಲ್ಲಾ ನಾಗರಿಕರನ್ನು ಮನವಿ ಮಾಡುತ್ತದೆ.
