ಬೆಂಗಳೂರು: ಸದಾ ನಿಮ್ಮೊಂದಿಗೆ ಎಂಬ ಟ್ಯಾಗ್ ಲೈನ್ ಹೊಂದಿರುವ ನ್ಯೂಸ್ 7 ಕನ್ನಡ ವೆಬ್‍ಸೈಟ್ ಇಂದು ಲೋಕಾರ್ಪಣೆ ಆಗಿದೆ.
ನ್ಯೂಸ್ 7 ಕನ್ನಡ ವೆಬ್‍ಸೈಟ್ ದೈನಂದಿನ ಸುದ್ದಿಗಳ ಜೊತೆ ಜೊತೆಯಲ್ಲೇ ಮನರಂಜನೆ, ಕ್ರೀಡೆ, ಹೀಗೆ ಪ್ರತಿಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಲಿದೆ.
ನ್ಯೂಸ್ 7 ಜನಸಾಮಾನ್ಯರ ಪ್ರತಿನಿಧಿಯಂತೆ ಕೆಲಸ ಮಾಡಲಿದ್ದು, ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಪತ್ರಿಕಾರಂಗದ ಘನತೆ ಹೆಚ್ಚಿಸಲು ನ್ಯೂಸ್ 7 ಕನ್ನಡ ಶ್ರಮಿಸಲಿದೆ.