ಬಂಟ್ವಾಳ – ಆಗಸ್ಟ್ :25 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಸಭೆಯು ಕ್ಷೇತ್ರ ಅಧ್ಯಕ್ಷರಾದ ಮೂನಿಶ್ ಅಲಿಯವರ ಅಧ್ಯಕ್ಷತೆಯಲ್ಲಿ ಬಿ ಸಿ ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮಿತಿಯ ಅಧ್ಯಕ್ಷ ಮೂನಿಶ್ ಅಲಿ ಪಕ್ಷದ ಕಾರ್ಯಾ ಚಟುವಟಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ ಮಾತನಾಡಿ, ಎಲ್ಲಾ ಪ್ರತಿನಿಧಿಗಳು, ನಾಯಕರು ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಕ್ಷೇತ್ರ ಸಮಿತಿಯೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ಕ್ಷೇತ್ರ ಪ್ರತಿನಿಧಿ ಸಭೆಯನ್ನು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪಾನ್ಸೋ ಪ್ರಾಂಕೊ ಧ್ವಜಾರೋಹಣ ನೆರವೇರಿಸಿ ಉದ್ಘಾಟನೆ ಮಾಡಿದರು.
ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಮತ್ತು ಜೊತೆ ಕಾರ್ಯದರ್ಶಿಗಳಾದ ಮುಬಾರಕ್ ಗೂಡಿನಬಳಿ, ಅಶ್ರಫ್ ತಲಪಾಡಿ ಮತ್ತು ಕ್ಷೇತ್ರ ಸಮಿತಿ ಸದಸ್ಯ ಮುಷ್ತಾಕ್ ತಲಪಾಡಿ ಕ್ಷೇತ್ರದ 2021-24ರ ಸಂಕ್ಷಿಪ್ತ ವರದಿಯನ್ನು ವಾಚಿಸಿದರು.
ಚುನಾವಣಾ ಅಧಿಕಾರಿಯಾಗಿ ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ನವಾಝ್ ಉಳ್ಳಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮತ್ತು ಅಶ್ರಫ್ ಅಡ್ಡೂರು ಆಗಮಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ನಾಯಕತ್ವ ಎಂಬ ವಿಷಯದ ಬಗ್ಗೆ ತರಗತಿ ನಡೆಸಿದರು.
ಬಂಟ್ವಾಳ ಪುರಸಭೆಗೆ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೂನಿಷ್ ಆಲಿ ಅವರನ್ನು ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪ್ರತೀ ಮೂರು ವರ್ಷಗಳಿಗೆ ನಡೆಯುವ ಆಂತರಿಕ ಚುನಾವಣೆಲ್ಲಿ ನೂತನ ಅಧ್ಯಕ್ಷರಾಗಿ ಸಾಹುಲ್ ಎಸ್ ಎಚ್, ಕಾರ್ಯದರ್ಶಿಯಾಗಿ ಅಕ್ಬರ್ ಅಲಿ ಪೊನ್ನೋಡಿ, ಉಪಾಧ್ಯಕ್ಷರಾಗಿ ಮುಷ್ತಾಕ್ ತಲಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಕಬೀರ್ ಅಕ್ಕರಂಗಡಿ ಮತ್ತು ಬಶೀರ್ ಬೊಳ್ಳಾಯಿ, ಕೋಶಾಧಿಕಾರಿಯಾಗಿ ಯಾಸಿರ್ ಕಲ್ಲಡ್ಕ, ಸಮಿತಿ ಸದಸ್ಯರಾಗಿ ಮೂನಿಷ್ ಆಲಿ, ಶಾಕಿರ್ ಕುಮೇರ್, ಇಕ್ಬಾಲ್ ಇಝಾನ್, ಇರ್ಫಾನ್ ಕಾವಳಕಟ್ಟೆ ಮತ್ತು ಅಝೀಝ್ ಕಡಂಬು ಆಯ್ಕೆಯಾದರು.
ಇಂದಿನ ಪ್ರತಿನಿಧಿ ಸಭೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಅಬೂಬಕ್ಕರ್ ಮದ್ದ, ರಾಜ್ಯ ಮಹಿಳಾ ನಾಯಕಿಯಾದ ಶಾಹಿದಾ ತಸ್ನೀಂ, ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಗೂಡಿನ ಬಳಿ ಉಪಸ್ಥಿತರಿದ್ದರು.
ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಅನ್ವರ್ ಬಡಕಬೈಲ್ ಸ್ವಾಗತಿಸಿ, ಕ್ಷೇತ್ರ ಸಮಿತಿ ನೂತನ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಧನ್ಯವಾದಗೈದು, ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.