ಮಂಗಳೂರು: ಪಡೀಲ್ ನಲ್ಲಿ ನಿರ್ಮಾಣಗೊಂಡಿರುವ ಜನಪ್ರಿಯಾ ಆಸ್ಪತ್ರೆಯನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರು ಅಧಿಕೃತವಾಗಿ ಉದ್ಘಾಟಿಸಿದರು. ಇಂದಿನಿಂದ ಆಸ್ಪತ್ರೆ ಸಾರ್ವಜನಿಕರಿಗೆ ಮುಕ್ತವಾಗಿದೆ.ಬಹು ಇರ್ಶಾದ್ ದಾರಿಮಿ ಉಸ್ತಾದ್ ಮಿತ್ತಬೈಲ್,ಆಸ್ಪತ್ರೆಯ ಮಾಲಕರಾದ ಡಾ ಅಬ್ದುಲ್ ಬಶೀರ್, ಡಾ ಮೊಯ್ದಿನ್ ನಫ್ಸೀರ್, ಡಾ ಶಾಹ್ಝಾದ್ ಅಬ್ದುಲ್ಲಾ, ಡಾ ಶಫೀಕ್ ಮುಹಮ್ಮದ್, ಶಾಮಿರ್ ಅಬ್ದುಲ್ ರಹ್ಮಾನ್, ಬದ್ರಿಯಾ ಖಾದರ್ ಹಾಜಿ,ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಸದಸ್ಯರಾದ ಅದ್ದು ಹಾಜಿ, ಹೈದರ್ ಪರ್ತಿಪ್ಪಾಡಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.