ಬಂಟ್ವಾಳ, ಜು 27 : ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ಜುಲೈ 27 ಶನಿವಾರ ಬೆಳಿಗ್ಗೆ 7.7 ರಲ್ಲಿ ಹರಿಯುತ್ತಿದೆ. ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವ ಪರಿಣಾಮ ನೀರಿನ ಮಟ್ಟ ಹೆಚ್ಚಳಗೊಂಡಿದೆ.
ನೀರಿನ ಪ್ರಮಾಣ 8 ಮೀ. ಅಪಾಯಕಾರಿ ಮಟ್ಟವಾಗಿದ್ದು, 8.5 ಮೀ. ತಲುಪಿದರೆ ಪಾಣೆಮಂಗಳೂರಿನ ಭಾಗದಲ್ಲಿ ಪ್ರವಾಹದ ನೀರು ಮನೆಯೊಳಗೆ ನುಗ್ಗುತ್ತದೆ.