ಮಂಗಳೂರು : ಸುರತ್ಕಲ್ ಚೊಕ್ಕಬೆಟ್ಟು ಪ್ರದೇಶದಲ್ಲಿ ಇಂದು ಬೀಸಿದ ಬಾರಿ ಗಾಳಿ ಮಳೆಗೆ ಸುಮಾರು 25ಕ್ಕೂ ಹೆಚ್ಚು ವಾಸದ ಮನೆಗಳಿಗೆ ಹಾನಿಯಾಗಿದ್ದು, ಅಲ್ಲದೆ ಸರಕಾರಿ ಶಾಲೆಯ ಹಂಚುಗಳು ಬಿದ್ದು ಓರ್ವ ವಿದ್ಯಾರ್ಥಿಯ ತಲೆಗೂ ಗಾಯವಾದ ಘಟನೆ ಇಂದು ಚೊಕ್ಕಬೆಟ್ಟುವಿನಲ್ಲಿ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಬಂದ ಮಾಜಿ ಶಾಸಕರಾದ ಮೋಹಿಯುದ್ದೀನ್ ಭಾವ ಅವರು ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಜಿಲ್ಲಾಧಿಕಾರಿಗಳನ್ನು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಕರೆಯ ಮುಖಾಂತರ ಸಂಪರ್ಕಿಸಿ ಘಟನೆಯ ವಿವರವನ್ನು ನೀಡಿದರು.