ಪುತ್ತೂರು: ನಗರಸಭೆ ವ್ಯಾಪ್ತಿಗೊಳಪಟ್ಟ ಪುತ್ತೂರು -ಉಪ್ಪಿನಂಗಡಿ ಮುಖ್ಯ ರಸ್ತೆಯ ಪಡೀಲ್ ಬಳಿ ರಸ್ತೆಯ ಎರಡೂ ಬದಿಗಳಲ್ಲಿ ಅಪಾಯಕಾರಿ ಗುಂಡಿಗಳಿದ್ದು, ನಗರಸಭೆ ಅಧಿಕಾರಿಗಳು ಗಮನಹರಿಸ ಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ವಾಹನ ಸಂಚಾರ ಮಾಡುವುದು ಕಷ್ಟಕರವಾಗಿದೆ. ಎಷ್ಟೋ ಜನ ವಾಹನ ಸಂಚಾರರು ಈ ಗುಂಡಿಗೆ ಬಿದ್ದು ಎದ್ದು ಹೋಗುದನ್ನು ಮನಗಂಡು ನಗರಸಭೆಯವರು ಇತ್ತಕಡೆ ಗಮನ ಹರಿಸುವಾಗ ಒಂದೆರೆಡು ಜೀವ ಹೋಗುವ ಸಾದ್ಯತೆ ಖಂಡಿತಾ ಇದೆ ಎಂದು ಹತ್ತಿರದ ಸೋಫಾ ಅಂಗಡಿಯ ಮಾಲೀಕ ನಾಸೀರ್ ಹೇಳಿದ್ದಾರೆ. ಅಲ್ಲದೆ, ಅವರು ತಾತ್ಕಾಲಿಕವಾಗಿ ತನ್ನಿಂದ ಸಾಧ್ಯವಾದ ಶಮಧಾನದ ಮೂಲಕ ಗುಂಡಿಗೆ ಮಣ್ಣು ತುಂಬಿಸಿ ಮಾನವೀಯತೆ ಮೆರೆದಿದ್ದಾರೆ.
ಇನ್ನಾದರೂ ನಗರಸಭೆಯ ಅಧಿಕಾರಿಗಳು ಈ ಸ್ಥಳವನ್ನು ಪರಿಶೀಲನೆ ಮಾಡಿ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಸ್ಥಳಿಯರು ಆಗ್ರಹಿಸಿದ್ದಾರೆ.