December 23, 2024
IMG-20241127-WA0012

ಬಂಟ್ವಾಳ: ತಾಲೂಕಿನ ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ಗ್ರಾ.ಪಂ.ಗಳಲ್ಲಿ ತೆರವಾದ 11 ಸ್ಥಾನಗಳಿಗೆ ನ. 23ರಂದು ಮತದಾನ ನಡೆದಿದ್ದು, ಮಂಗಳವಾರ ಫಲಿತಾಂಶ ಹೊರಬಿದ್ದಿದೆ.

ಕಾಂಗ್ರೆಸ್‌ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರೆ, ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದ್ದು, ಎಸ್.ಡಿ.ಪಿ.ಐ.ಎಲ್ಲಾ ಸ್ಥಾನವನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.

ಪುರಸಭೆಯ 2 ನೇ ವಾರ್ಡ್ ನ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ ಪೂಜಾರಿ ಅವರು ಬಿಜೆಪಿ ಅಭ್ಯರ್ಥಿ ಇಂದ್ರೇಶ್ ವಿರುದ್ದ ಸುಮಾರು 40 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ವಿವಿಧ ಗ್ರಾ.ಪಂ.ನಲ್ಲಿ ಒಟ್ಟು 11 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಿದರೆ 2 ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎಸ್ಡಿಪಿಐ ತನ್ನ ವಶದಲ್ಲಿದ್ದ ಸ್ಥಾನವನ್ನು ಕಳೆದುಕೊಂಡಿದೆ.

ಬಂಟ್ವಾಳ ಪುರಸಭೆಯಲ್ಲಿ ಪುರುಷೋತ್ತಮ ಪೂಜಾರಿ, ಸಜೀಪ ಮೂಡ ಗ್ರಾ.ಪಂ.ಕರೀಂ, ಪಂಜಿಕಲ್ಲು ಕೇಶವ, ರಾಜೇಶ್ ಗೌಡ, ಬಡಗಬೆಳ್ಳೂರು ಮೋಹನ್ ದಾಸ ಕೊಟ್ಟಾರಿ, ಅಮ್ಟಾಡಿ ಕೇಶವ ಜೋಗಿ, ಕೊಡಂಬೆಟ್ಟು ಜಯಂತಿ ಸತೀಶ್ ಪೂಜಾರಿ, ಮಂಚಿ ರಾಜೇಶ್ ನೂಜಿಪ್ಪಾಡಿ, ಸಜೀಪ ಮುನ್ನೂರು ಇಸ್ಮಾಯಿಲ್ ನಂದಾವರ ಕೋಟೆ, ಧನಂಜಯ ಶೆಟ್ಟಿ ಮರ್ತಾಜೆ, ಸೆಲಿನಾ ಡಿ.ಸೋಜ ಹಾಗೂ ಬಿಳಿಯೂರು ನಳಿನಿ ಅವರು ವಿಜೇತರಾಗಿದ್ದಾರೆ.

Leave a Reply

Your email address will not be published. Required fields are marked *