February 28, 2026
Kuwait_airport_1772299799190_1772299799390

ನವದೆಹಲಿ, ಫೆಬ್ರವರಿ 28: ಅಮೆರಿಕ ಮತ್ತು ಇಸ್ರೇಲ್ ಸೇರಿ ತಮ್ಮ ದೇಶದ ಮೇಲೆ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಇರಾನ್ ಕಂಡ-ಕಂಡ ದೇಶಗಳ ಮೇಲೆಲ್ಲ ವೈಮಾನಿಕ ದಾಳಿ ನಡೆಸುತ್ತಿದೆ. ದುಬೈ, ಬಹ್ರೇನ್, ಅಬುಧಾಬಿಯಲ್ಲಿ ಅಮೆರಿಕದ ವಾಯುನೆಲೆಯ ಮೇಲೆ ದಾಳಿ ನಡೆಸಲಾಗಿದೆ. ದುಬೈನಲ್ಲಿ ಜನಪ್ರಿಯ ಕಟ್ಟಡಗಳ ಮೇಲೂ ದಾಳಿ ನಡೆಸಲಾಗಿದೆ. ಇದೀಗ ಕುವೈತ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಲಾಗಿದೆ. ಇದೀಗ ಕುವೈತ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಿರುವ ಇರಾನ್ ಅಮಾಯಕ ಜನರಿರುವ ಸ್ಥಳಗಳನ್ನು ಕೂಡ ಗುರಿಯಾಗಿಸಿಕೊಂಡಿದೆ.

ಇರಾನ್‌ನಿಂದ ಹಾರಿಸಲಾದ ಡ್ರೋನ್ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದ್ದು, ಹಲವಾರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಿಂದ ತುರ್ತು ಪ್ರೋಟೋಕಾಲ್‌ಗಳನ್ನು ಘೋಷಿಸಲಾಯಿತು