December 22, 2024
IMG_20241028_123046-3.jpg

ಉಡುಪಿ : ಮಣಿಪಾಲ ಪೆರಂಪಳ್ಳಿಯ ಸಾಯಿರಾಧಾ ಟೌನ್‌ಶಿಪ್ ಬಳಿ ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಉಡುಪಿ ಪೋಲಿಸ್ ಬಂಧಿಸಿದ ಘಟನೆ ನಡೆದಿದೆ.


ಬಂಧಿತ ಆರೋಪಿಯನ್ನು ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬಲೆ ಬೀಸಿದ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್‌ರವರ ನೇತೃತ್ವದ ತಂಡ ಆರೋಪಿಯಿಂದ ಸುಮಾರು 1,87,500 ಮೌಲ್ಯದ 2 ಕೆಜಿ 344 ಗ್ರಾಂ ತೂಕದ ಗಾಂಜಾ, ಒಂದು ಲಕ್ಷ ಮೌಲ್ಯದ APRILIA ಕಂಪೆನಿಯ ಸ್ಕೂಟರ್, 5.810 ನಗದು, 10 ಸಾವಿರ ಮೌಲ್ಯದ ಮೊಬೈಲ್, ಒಂದು ಚೂರಿ ಸಹಿತ ಒಟ್ಟು 3,04,610 ಲಕ್ಷ ಮೌಲ್ಯದ ಸೊತ್ತುಗಳನ್ನು ಸೆನ್ ಅಪರಾಧ ಪೊಲೀಸ್‌ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *