April 29, 2025
IMG-20250429-WA0027

ಪೆರಾಡಿ: ಬದ್ರಿಯಾ ಜುಮಾ ಮಸೀದಿ ಪೆರಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಆದಿತ್ಯವಾರದಂದು ಕುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಅಬ್ದುಲ್ ಸಲಾಂ ಮರೋಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮುನವ್ವರ್ ರಾಝಿಕ್ ಸ್ವಾಗತಿಸಿ ಕಳೆದ ಅವಧಿಗಳ ಲೆಕ್ಕ ಮತ್ತು ಆಯವ್ಯಯಗಳನ್ನು ಮಂಡಿಸಿದರು.

ಸಭೆಯಲ್ಲಿ 2025-26ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಜಿ. ಇದಿನಬ್ಬ, ಉಪಾಧ್ಯಕ್ಷರಾಗಿ
ಹೈದ್ರೋಸ್ ಬೀರೋಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ದುಗನೊಟ್ಟು, ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್ ಪೆರಾಡಿ, ಕೋಶಾಧಿಕಾರಿಯಾಗಿ
ಅಕ್ಬರ್ ಅಲಿ ಪೆರಾಡಿ, ಲೆಕ್ಕಪರಿಶೋಧಕರಾಗಿ
ಅಬ್ದುಲ್ ಹಮೀದ್ ಸಾವ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಸಲಾಂ ಮರೋಡಿ, ಅಬ್ದುಲ್ ಕರೀಂ (ತವಕ್ಕಲ್), ಅಬ್ದುಲ್ಲಾ ಪೆರಾಡಿ, ಯು.ಕೆ. ಮುಹಮ್ಮದ್, ಹಸನಬ್ಬ 5ಸೆಂಟ್ಸ್, ಅಬ್ದುಲ್ ಖಾದರ್ ಚೆರಿಯ, ಶರೀಫ್ ನೆಲ್ಲಿಗುಡ್ಡೆ, ಶರೀಫ್ ಕೊಲ್ಪೆ, ಅಬ್ಬಾಸ್ ಸಾವ್ಯ, ತೌಸೀಫ್ ಪೆರಾಡಿ, ಅಕ್ಬರ್ ನೆಲ್ಲಿಗುಡ್ಡೆ ಇವರನ್ನು ಆಯ್ಕೆಮಾಡಲಾಯಿತು.

ಕೊನೆಯಲ್ಲಿ ಜಮಾಅತ್ ಖತೀಬರಾದ ಬಹು. ಸಫ್ವಾನ್ ಬಾಖವಿ ಮಾಪಾಲ್ ಮಾತನಾಡಿ “ಮಸೀದಿಯ ಅಭಿವೃದ್ಧಿಗಾಗಿ ಇದುವರೆಗೂ ಶ್ರಮಪಟ್ಟು ಸೇವೆಗೈದ ಎಲ್ಲರನ್ನೂ ಸ್ಮರಿಸಿ,
ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ, ನಿಮ್ಮ ಸೇವಾ ಅವಧಿಯಲ್ಲಿ ಜಮಾಅತ್ ಇನ್ನಷ್ಟು ಅಭಿವೃದ್ಧಿಗೊಳ್ಳಲಿ ಎಂದು ಹಾರೈಸಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.