

ಉಲ್ಲಾಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್’ನ ಶಶಿಕಲಾ, ಉಪಾಧ್ಯಕ್ಷ ಸ್ವಪ್ನ ಹರೀಶ್ ಆಯ್ಕೆ
ಉಳ್ಳಾಲ: ಉಲ್ಲಾಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್’ನ ಶಶಿಕಲಾ, ಉಪಾಧ್ಯಕ್ಷ ಸ್ವಪ್ನ ಹರೀಶ್ ಆಯ್ಕೆಯಾಗಿದ್ದಾರೆ.
ಉಲ್ಲಾಲ ನಗರಸಭೆ ಅಧ್ಯಕ್ಷ ಗಾದಿಗೆ ಪರಿಶಿಷ್ಟ ವರ್ಗ ಎಸ್ ಸಿ ಮಹಿಳೆಗೆ ಮೀಸಲಿರಿಸಲಾಗಿತ್ತು. ನಗರ ಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಲಾ 23 ಮತಗಳ ಸ್ಪಷ್ಟ ಬಹುಮತ ದೊಂದಿಗೆ ಆಯ್ಕೆ ಗೊಂಡರು.
ಕಾಂಗ್ರೆಸ್ ಪಕ್ಷದ 13, ಎಸ್ ಡಿ ಪಿ ಐ ಪಕ್ಷದ 6, ಪಕ್ಷೇತರ 2 ,ಜೆಡಿಎಸ್ ಚುನಾಯಿತರಾಗಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇಬ್ಬರು ಸದಸ್ಯರು ಸೇರಿ ಒಟ್ಟು 23 ಬಹುಮತದಲ್ಲಿ ಶಶಿಕಲಾ ವಿಜೇತರಾದರು.
ಬಿಜೆಪಿಯ ಅಧ್ಯಕ್ಷ ಅಭ್ಯರ್ಥಿ ಭವಾನಿ ಯವರಿಗೆ ಅವರ ಪಕ್ಷದ ಕೇವಲ ಆರು ಮತಗಳು ಮಾತ್ರ ಬಿದ್ದು ಸೋಲುಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಪಕ್ಷದ ಸಪ್ನಾ ಹರೀಶ್ ರವರು 17 ಮತಗಳನ್ನು ಪಡೆದು ವಿಜೇತರಾದರು.
ಕಾಂಗ್ರೆಸ್ 13 ಜೆಡಿಎಸ್ 2 ಪಕ್ಷೇತರ 2 ಮತಗಳನ್ನು ಪಡೆದರು. ಎಸ್ ಡಿ ಪಿ ಐ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಝರೀನಾ ರಯುಫ್ ರವರು ಕೇವಲ ತಮ್ಮ ಪಕ್ಷದ ಆರು ಸದಸ್ಯರಗಳ ಮತಗಳನ್ನು ಮಾತ್ರ ಪಡೆದರು.