ಉಡುಪಿ :ಅಕ್ಟೋಬರ್ 29 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷನಾಲಯ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಯಲ್ಲಿ ಜಿಲ್ಲಾ ಸಶ್ತ್ರಚಿಕಿತ್ಸಕರಾದ ಡಾ.ಅಶೋಕ್.H ರವರ ಅಧ್ಯಕ್ಷತೆಯಲ್ಲಿವಿಶ್ವ ಪಾರ್ಶ್ವವಾಯು ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಐ.ಪಿ.ಗಡಾದ ರವರು ಉದ್ಘಾಟಿಸಿ, ಸಾರ್ವಜನಿಕರಲ್ಲಿ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಲು ಯುವಜನರು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.ಪ್ರಾಸ್ತಾವಿಕ ಭಾಷಣಗೈದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ ರವರು ಪಾರ್ಶ್ವವಾಯು ಕುರಿತ ಸಂಕ್ಷಿಪ್ತ ಮಾಹಿತಿ ನೀಡಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕ್ರೀಡಾಪಟು ಉದಯಕುಮಾರ್ ಶೆಟ್ಟಿಯವರು ಕ್ರೀಡಾ ಮನೋಭಾವ ಮತ್ತು ಜೀವನ ಶೈಲಿಯು ನಮ್ಮ ಸ್ವಾಸ್ಥ್ಯ ಜೀವನಕ್ಕೆ ಉತ್ತೇಜನ ನೀಡುತ್ತದೆ, ಈ ವರ್ಷದ ಸ್ಟ್ರೋಕ್ ದಿನದ ಘೋಷಣೆಯಂತೆ “ಕ್ರೀಡೆಯ ಭಾವನಾತ್ಮಕ ಸಂಬಂದ ಮೂಲಕ ಸ್ಟ್ರೋಕನ್ನು
ಅತಿಜೀವಿಸೋಣ” ಎಂಬ ಮಾತನ್ನು ಒತ್ತಿ ಹೇಳಿದರು,
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿಗಳಾದ ಡಾ.ವಾಸುದೇವ್, IMA ಇದರ ಕರಾವಳಿ ಶಾಖೆ ಉಡುಪಿ ಅಧ್ಯಕ್ಷರಾದ ಡಾ. ಸುರೇಶ್ ಶೆಣ್ಯೆ, CSI ಲೊಂಬೋರ್ಡ್ ಮೆಮೋರಿಯಲ್ ನರ್ಸಿಂಗ್ ಕಾಲೇಜು ಉಪನ್ಯಾಸಕಿ ಶ್ರೀಮತಿ ಮಾಲತಿ ಮತ್ತುಉಡುಪಿ ಕಾಲೇಜು ಆಫ್ ನರ್ಸಿಂಗ್ ಇಲ್ಲಿನ ಉಪನ್ಯಾಸಕಿ ಮಾಲಾಶ್ರೀ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕರಿ ಡಾ.ನಿಕಿನ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.CSI ಲೋಂಬೋರ್ಡ್ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನ ನಡೆಯಿತು, ಕಾರ್ಯಕ್ರಮವನ್ನು ಸೈಕಾಲಜಿಸ್ಟ್ ಅಬ್ದುಲ್ ಸಮದ್ ಸ್ವಾಗತಿಸಿದರು,ಬ್ರೈನ್ ಹೆಲ್ತ್ ಉಪಕ್ರಮದ ಜಿಲ್ಲಾ ಸಂಯೋಜಕಿ ಐಶ್ವರ್ಯ ವಂದಿಸಿದ ಕಾರ್ಯಕ್ರಮವನ್ನು ಜಿಲ್ಲಾಸ್ಪತ್ರೆಯ NCD ವಿಭಾಗದ ಕೌನ್ಸಿಲರ್ ಮನು.S.B ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ NCD ಮತ್ತು BHI ಸಿಬ್ಬಂದಿಗಳು ಉಪಸ್ಥಿತರಿದ್ದರು