ಬಂಟ್ವಾಳ : SKSSF ಎರಡು ವರ್ಷಕ್ಕೊಮ್ಮೆ ನಡೆಸಿ ಬರುತ್ತಿರುವ ಕಲೋತ್ಸವ ಕಾರ್ಯಕ್ರಮವು ಪರಂಗಿಪೇಟೆ ಕ್ಲಸ್ಟರ್ ವತಿಯಿಂದ ಜುವೈರಿಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕುಂಪನ ಮಜಲ್ ನಲ್ಲಿ ಕ್ಲಸ್ಟರ್ ಉಪಾಧ್ಯಕ್ಷರಾದ ಬಹು.ರಶೀದ್ ಹನೀಫಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಾರಿಪಳ್ಳ ಖತೀಬ್ ಇಲ್ಯಾಸ್ ಅರ್ಶದಿ ಉದ್ಘಾಟಿಸಿ ದರು. ಕಲೋತ್ಸವ ಕಾರ್ಯಕ್ರಮ ದಲ್ಲಿ 5 ಶಾಖೆಗಳು ಭಾಗವಹಿಸಿ ಪ್ರಥಮ ಸ್ಥಾನ SKSSF ಮಾರಿಪಳ್ಳ ಶಾಖೆ ಪಡೆದರೆ ದ್ವೀತಿಯ ಸ್ಥಾನವನ್ನು SKSSF ಅಮೆಮಾರ್ ಪಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷ ತೆಯನ್ನು SKSSF ಪರಂಗಿಪೇಟೆ ಕ್ಲಸ್ಟರ್ ಅದ್ಯಕ್ಷರಾದ ಅಬ್ದುಲ್ಲಾ MKB ವಹಿಸಿ ಸಭೆಯನ್ನು ಕುಂಪನ ಮಜಲ್ ಖತೀಬ್ ಉಬೈದುಲ್ಲಾ ಅಝ್ಹರಿ ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ಅತಿಧಿಯಾಗಿ SKSSF ವಿಖಾಯ ಕರ್ನಾಟಕ ರಾಜ್ಯ ಚೇರ್ ಮ್ಯಾನ್ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಆರಫಾ ಜುಮ್ಮಾ ಮಸೀದಿ ಅದ್ಯಕ್ಷರಾದ ಮುಹಮ್ಮದ್ ಬುಖಾರಿ ಮುಹ್ಯದ್ದೀನ್ ಜುಮ್ಮಾ ಮಸೀದಿ ಅದ್ಯಕ್ಷರಾದ ಎಪ್ ಉಮರ್ ಪಾರೂಕು ಬದ್ರಿಯ್ಯೀನ್ ಜುಮ್ಮಾ ಮಸೀದಿ ಮಾರಿಪಳ್ಳ ಉಪಾಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ ಪುದು ಗ್ರಾಮ ಪಂಚಾಯಕು ಉಪಾಧ್ಯಕ್ಷ ರಾದ ಇಕ್ಬಾಲ್ ಸುಜೀರ್, ದಾರುಸ್ಸಲಾಂ ಮದರಸ ಕುಂಪನಮಜಲ್ ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ SKSSF ಸಹಚಾರು ಕರ್ನಾಟ ರಾಜ್ಯ ಸಮಿತಿ ಸದಸರಾದ ಇಮ್ರಾನ್ ಮಾರಿಪಳ್ಳ, SKSSF ಮಂಗಳೂರು ವಲಯ ಸಮಿತಿ
ಪ್ರಧಾನ ಕಾರ್ಯದರ್ಶಿ ನಿಯಾಝ್ ಫೈಝಿ ಅಮೆಮಾರ್. SKSSF ಕುಂಪನಮಜಲ್ ಶಾಖೆಯ ಅದ್ಯಕ್ಷರಾದ ನಿಝಾರ್ ಕುಂಪನಮಜಲ್, SKSSF ಕುಂಪನಮಜಲ್ ಶಾಖೆ ಪ್ರದಾನ ಕಾರ್ಯದರ್ಶಿ ಸಲೀಂ ಮಲ್ಲಿಕ್ , SKSSF ಮಾರಿಪಳ್ಳ ಯೂನಿಟ್ ಅದ್ಯಕ್ಷರಾದ ಮುಹಮ್ಮದ್ ಅಸ್ಪಾಕ್ ಫೈಝಿ ಮುಂತಾದವರು ಕಾರ್ಯಕ್ರಮದಲ್ಲಿ ಬಾಗವಹಿಸಿದರು SKSSF ಪರಂಗಿಪೇಟೆ ಕ್ಲಸ್ಟರ್ ಉಪಾಧ್ಯಕ್ಷ ರಶೀದ್ ಹನೀಫಿ ಸ್ವಾಗತಿಸಿ ಪ್ರಧಾನ
ಕಾರ್ಯದರ್ಶಿ ಶಾಕೀರ್ ಕುಂಪನಮಜಲ್ ವಂದಿಸಿದರು, SKSSF ಫರಂಗಿಪೇಟೆ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ಲತೀಫ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು