

ಮಂಗಳೂರು: ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಕಾಣಿಕೆ ಹುಂಡಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ.
ಮಂಗಳೂರು ನಗರದ ಮೇರಿಹಿಲ್‍ನ ಕೊರಗಜ್ಜನ ಕಟ್ಟೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳತನಕ್ಕೂ ಮುನ್ನ ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾನೆ. ಅಲ್ಲದೇ ಕಟ್ಟೆಗೆ ಮೂರು ಸುತ್ತು ಸುತ್ತಿದ್ದಾನೆ. ಬಳಿಕ ಕಾಣಿಕೆ ಹುಂಡಿಯನ್ನು ಹೊತ್ತೊಯ್ದಿದ್ದಾನೆ.
ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕಳ್ಳ ಈ ಕೃತ್ಯ ಎಸಗಿದ್ದಾನೆ. ಕಾಣಿಕೆ ಹುಂಡಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.