ಬಂಟ್ವಾಳ: ಸುರಿಯುತ್ತಿರುವ ಬಾರಿ ಪ್ರಮಾಣದ ಮಳೆಯಿಂದಾಗಿ ಘಟ ನೀರಿನ ಮಟ್ಟ ಏರಿಕೆಯಾಗಿದ್ದು, ಬಂಟ್ವಾಳದಲ್ಲಿ ಬೆಳಗ್ಗೆ ನೀರಿನ ಮಟ್ಟ 8:4 ಮೀ. ಗೆ ತಲುಪಿದೆ. ಇನ್ನೂ ನದಿ ತೀರದ ಪ್ರದೇಶಗಳಲ್ಲಿ ಇಂದು ಶಾಲೆಗೆ ರಜೆ ಸರಲಾಗಿದೆ.ಪಾಣೆಮಂಗಳೂರಿನ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.ಗೂಡಿನ ಬಳಿ – ಬಂಟ್ವಾಳ ಸಂಪರ್ಕಿಸುವ ಒಳ ರಸ್ತೆ ಮುಳುಗಡೆಯಿಗಿದ್ದು ಸಂಚಾರ ಬಂದ್ ಮಾಡಲಾಗಿದೆ. ಪಾಣೆಮಂಗಳೂರು ಸಂಪರ್ಕಿಸಿವ ಆಲಡ್ಕ ರಸ್ತೆ ಸಂಪೂರ್ಣ ಜಲವೃತವಾಗಿದೆ. ನದಿ ನೀರು ಏರಿಕೆಯಾಗಿದ್ದು, ರಸ್ತೆಗೆ ನದಿ ನೀರು ಬಂದಿರುತ್ತದೆ. ಪೇಟೆ ಭಾಗದ ಮಕ್ಕಳು ಹೆಚ್ಚಾಗಿ ಆಟೋ ಮತ್ತು ವ್ಯಾನ್ ಗಳಲ್ಲಿ ಶಾಲೆಗೆ ತೆರಳುತ್ತಾರೆ. ನದಿಯ ದಡಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ್ಲ, ಪೆರ್ನೇ ಕಡೆ ಇನ್ನೂ ನೀರಿನ ಅಪಾಯಕಾರಿ ಮಟ್ಟದಿಂದ ಅಪಾಯವುಳ್ಳ ಶಾಲೆಗಳ ಸಿಆರ್ ಪಿ ಮತ್ತು ಎಸ್‌ಟಿಎಂಸಿ ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಹೇಳಿದ್ದಾರೆ.