ಬೆಳಗಾವಿ: ಒಮಾನ್ ದೇಶದಲ್ಲಿ ಈಚೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಗೋಕಾಕ ಮೂಲದ ನಾಲ್ವರು ಸಜೀವ ದಹನವಾಗಿದ್ದಾರೆ.
ಪವನ್‌ಕುಮಾರ್ ಮಾಯಪ್ಪ ತಹಶೀಲ್ದಾರ, ಪೂಜಾ ಮಾಯಪ್ಪ ತಹಶೀಲ್ದಾರ, ವಿಜಯಾ ಮಾಯಪ್ಪ ತಹಶೀಲ್ದಾರ ಮತ್ತು ಅದಿಶೇಷ ಬಸವರಾಜ ಮೃತಪಟ್ಟವರು.
ಒಮಾನಿನ ಸಲಾಲಾ ನಗರದಿಂದ ಮುಸ್ಕತ್‌ಗೆ ತೆರಳುತ್ತಿದ್ದ ವೇಳೆ ಹೈಮಾ ಪ್ರದೇಶದ ಹತ್ತಿರ ಕಾರ್ ಅಪಘಾತಕ್ಕೀಡಾಯಿತು. ಮೊದಲು ಇವರೆಲ್ಲ ಕೇರಳದವರು ಎಂಬ ತಪ್ಪು ಮಾಹಿತಿ ರವಾನೆಯಾಗಿತ್ತು. ನಾಲ್ವರೂ ಗೋಕಾಕ ಮೂಲದವರು ಎಂದು ಭಾರತೀಯ ರಾಯಭಾರ ಕಚೇರಿ ಮೂಲಗಳು ಖಚಿತಪಡಿಸಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.