January 12, 2025
IMG-20241230-WA0034

ಮಂಗಳೂರು : ಮಂಜನಾಡಿ ಗ್ಯಾಸ್ ಸ್ಫೋಟ ದುರಂತದಲ್ಲಿ ನಾಲ್ಕು ಜನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟು ಒಬ್ಬರು ಬದುಕುಳಿದಿದ್ದಾರೆ.ನಾವು ನೆರೆಕರೆ ಊರವರು ಕುಟುಂಬಸ್ಥರು ಸೇರಿಕೊಂಡು ನಮ್ಮ ಅನುಭವ ಹಾಗೂ ಜವಾಬ್ದಾರಿಗೆ ತಕ್ಕಂತೆ ನಾಲ್ಕು ಜನರನ್ನು ಉಳಿಸಲು ಸತತ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಅಲ್ಲಾಹನ ವಿಧಿಯಿಂದ ಮೂರು ಜನ ಮೃತಪಟ್ಟು ಒಬ್ಬರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಗೀಚುವ ಮುನೀರ್ ಕಾಟಿಪಳ್ಳ ಹಾಗೂ ಅವರ ಕೂಟದವರ ರವರ ಪ್ರಕಾರ ನಮ್ಮ ಜವಾಬ್ದಾರಿ,ಹಾಗೂ ಪ್ರಾಮಾಣಿಕತೆ ಸಾಕಾಗದೇ ಇದ್ದರೆ,ಅತ್ಯಂತ ಅನುಭವ,ಜವಾಬ್ದಾರಿ ಪ್ರಾಮಾಣಿಕತೆ ಇರುವ ನೀವು ಮುಂದೆ ಬಂದು ಬದುಕುಳಿದಿರುವ ಆ ಹೆಣ್ಣುಮಗಳ ಮುಂದಿನ ಚಿಕಿತ್ಸೆ ಹಾಗೂ ಉನ್ನತ ಮಟ್ಟದ ತನಿಖೆಯ ಜವಾಬ್ದಾರಿಯನ್ನು ಬಂದು ವಹಿಸಿ ಗ್ಯಾಸ್ ಏಜೆನ್ಸಿಯಿಂದ ಈಗಿನ ಮೊತ್ತಕಿಂತ ಹೆಚ್ಚಿನ ಪರಿಹಾರ ತೆಗೆಸಿ ಕೊಟ್ಟರೆ ನಮಗೆ ಬಹಳಷ್ಟು ಸಂತೋಷ.

ಆದರೆ ಸಮಗ್ರ ತನಿಖೆಯಾಗಿ ಈಗ ಸಿಗುವ ಪರಿಹಾರವೂ ಸಿಗದೇ ಹೋದರೆ ಅದರ ಜವಾಬರಿಯನ್ನು ಕೂಡಾ ನೀವೇ ವಹಿಸಿಕೊಳ್ಳಬೇಕು ಎಂದು ನಮ್ಮ ಎಲ್ಲಾ ಊರವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆಂದು ಕಾಂಗ್ರೆಸ್ ಮುಖಂಡ ಎನ್ ಎಸ್ ಕರೀಮ್ ರವರು ಮನವಿ ಮಾಡಿಕೊಂಡಿದ್ದಾರೆ.