ಮಂಗಳೂರು :ಎನ್.ಎಸ್.ಯು.ಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಭೇಟಿ ಮಾಡಿ ಸಂಜೆ ಕಾಲೇಜು ಸ್ಥಗಿತಗೊಳಿಸಿರುವ ಕುರಿತು ಮಾತನಾಡಿ, ಅದನ್ನು ಸ್ಥಗಿತಗೊಳಿಸದಂತೆ ಮನವಿ ಮಾಡಿದರು ಇದರಿಂದ ಪ್ರದೇಶದ ವಿದ್ಯಾಭ್ಯಾಸ ಮಾಡಲಿಚ್ಛಿಸುವ ಅನೇಕ ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗುವ ಸಾಧ್ಯತೆಯಿದೆ,ಇದನ್ನು ಗಂಭೀರವಾಗಿ ಪರಿಗಣಿಸಿ NSUI ಮಂಗಳೂರು ವಿಧಾನಸಭಾ ಕ್ಷೇತ್ರರ ಅಧ್ಯಕ್ಷರಾದ ಶಾಹಿಲ್ ಮಂಚಿಲ ಅವರ ನೇತೃತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪಿ.ಎಲ್ ಧರ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ NSUI ಮಂಗಳೂರು ವಿಧಾನಸಭಾ ಕ್ಷೇತ್ರ ಮುಖಂಡರಾದ ದರ್ಶನ್, ಕುಂದರ್ ,ವಿಶಾಲ್ ಲೋಬೋ,ಶಾಕಿರ್ ಉಳ್ಳಾಲ, ಝಯನ್ ದೇರಳಕಟೆ ,
ಅಹಮದ್ ಫಾಝಿಲ್ ,ಮಹಮ್ಮದ್ ಅಶ್ರಫ್ ,ನೂಹ್ ಉಳ್ಳಾಲ ಉಪಸ್ಥಿತರಿದ್ದರು.