ಮಂಗಳೂರು: 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಪತ್ಭಾಂದವ ಸುಹೈಲ್ ಕಂದಕ್ ಅವರು ಆಯ್ಕೆಯಾಗಿದ್ದಾರೆ.
ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅತ್ಯಂತ ವಿಶೇಷ. ಪ್ರಶಸ್ತಿ ಪಡೆದಿದ್ದಕ್ಕಿಂತ, ಪ್ರಶಸ್ತಿಯೇ ತಾನಾಗಿ ಸಾಧಕನನ್ನು ಹುಡುಕಿಕೊಂಡು ಹೋಗಿದೆ. ಯಾವುದೇ ಪ್ರಚಾರ, ಜನಪ್ರಿಯತೆಯ ಭೂತಕನ್ನಡಿಗೂ ಬೀಳದಂಥ, ಎಲೆಮರೆ ಕಾಯಿಗಳು ಸರಕಾರದ ಕಣ್ಣಿಗೆ ಬಿದ್ದಿವೆ.
ಯಾವ ಫಲವನ್ನೂ ಎದುರು ನೋಡದೆ, ಕಾಯಕದಲ್ಲೇ ಜೀವಿತ ಸವೆಸುತ್ತಿರುವ, ನಾಡಸೇವೆಗೆ ಕನಸುಗಳನ್ನು ಮುಡಿಪಾಗಿಟ್ಟ ಕರಾವಳಿಯ ಹೆಮ್ಮೆಯ ನಾಯಕ ಸುಹೈಲ್ ಕದಂಕ್ ರವರ ಸಮಾಜ ಸೇವೆಯನ್ನು ಗುರುತಿಸಿಕೊಂಡಿದ್ದು, 2024 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಕೋವಿಡ್-19 ಸಂದರ್ಭದಲ್ಲಿ ತನ್ನ ಪ್ರಾಣವನ್ನು ಒತ್ತೆ ಇಟ್ಟು ಜಾತಿ ಧರ್ಮವನ್ನು ನೋಡದೆ ಶವಗಳ ಅಂತ್ಯ ಸಂಸ್ಕಾರ, ರೋಗಿಗಳಿಗೆ ಆಕ್ಸಿಜನ್, ಸಂಕಷ್ಟದಲ್ಲಿ ಇದ್ದವರಿಗೆ ಊಟದ ವ್ಯವಸ್ಥೆ ಮುಂತಾದ ಸಮಾಜ ಸೇವೆಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಸುಹೈಲ್ ತೊಡಗಿಸಿಕೊಂಡಿದ್ದರು.
ಅನೇಕರಿಗೆ ಪರೋಪಕಾರ ಮೆರೆದ ಸಾಮಾಜಿಕ ಸೇವಾ ವಿಭಾಗದಲ್ಲಿ ಸುಹೈಲ್ ಕದಂಕ್ ಅವರನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.