ಬಂಟ್ವಾಳ : ಸಜಿಪ ಮೂಡ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಗ್ರಿ ಇಲ್ಲಿ ಕಲಿಸುತ್ತಿರುವ 11 ಮಕ್ಕಳಿಗೆ ದಾನಿಗಳ ನೆರವಿನಿಂದ ಸಮವಸ್ತ್ರ ಹಾಗೂ ವಾಲಿಬಾಲ್ ನ್ನು ಮುಖ್ಯೋಪಾಧ್ಯಾಯಿನಿ ಫ್ಲೇವಿ ಲೋಬೋ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬದ್ರಿಯ ಜುಮ್ಮಾ ಮಸೀದಿ ಬೊಳ್ಳಾಯಿ ಇದರ ಪ್ರಧಾನ ಕಾರ್ಯದರ್ಶಿ ಬಿ ಎಸ್ ರಝಾಕ್ ಹಾಗು ಯಂಗ್ ಮೆನ್ಸ್ ನ ಸದಸ್ಯರಾದ ಬಶೀರ್ ಬೊಳ್ಳಾಯಿ, ಆಸೀಫ್ ಪಟ್ಟುಗಡ್ಡೆ, ಹಾಗು ಮುಹಮ್ಮದ್ ಫಿಶ್ ಉಪಸ್ಥಿತರಿದ್ದರು.
