June 22, 2026
IMG-20260304-WA0027

ಫರಂಗಿಪೇಟೆ: ಪುದು ಗ್ರಾಮದ ನೇತ್ರಾವತಿ ನದಿಯಲ್ಲಿ ನೂರಾರು ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ.

ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಜನ ಪ್ರತಿನಿಧಿಗಳು ತನಿಖೆಗೆ ಒತ್ತಾಯಿಸಿದ್ದಾರೆ.

ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ನಿನ್ನೆ ಸಂಜೆ ನನಗೆ ಕರೆ ಬಂದಿದೆ. ನದಿಯಲ್ಲಿ ಹೋಗಿ ನೋಡುವಾಗ ಆಧಾರ್ ಕಾರ್ಡ್‌ನ ಬಂಡಲ್ ಇದೆ. ಇದು ಅಂಚೆ ಕಚೇರಿಯ ನಿರ್ಲಕ್ಷ್ಯ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.