February 4, 2026
IMG-20251101-WA0484

ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರಾರ್ಥನೆ ಹಾಗೂ ನಾಡಗೀತೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಸಲಾಂ ಯಮಾನಿರವರು ವಿದ್ಯಾರ್ಥಿಗಳಿಗೆ ಸೌಹಾರ್ದತೆಯ ಸಂದೇಶವನ್ನು ಸಾರಿದರು.

ಸಮಾರಂಭದ ಅಧ್ಯಕ್ಷತೆಯನ್ನು ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಡ್ವಕೇಟ್ ರಿಯಾಝ್ ಹುಸೈನ್ ರವರು ವಹಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಇಬ್ರಾಹಿಂ ಸಲೀಂ ಪಿ ರವರು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿಕೊಟ್ಟರು. ಮದರಸ ಗುರುಗಳಾದ ಸದರ್ ಮಜೀದ್ ಪೈಝಿ ರವರು ಶಾಂತಿಯುತ ನಾಡನ್ನು ಕಟ್ಟುವ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಉಬೈದುಲ್ಲಾ, ಹಾರೂನ್ ರಶೀದ್ ಶಾಲಾ ಬೋಧಕ ಹಾಗೂ , ಬೋಧಕೇತರ ವೃಂದ , ಪೋಷಕವರ್ಗ ಹಾಗೂ ತೌಹೀದ್ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಅಣಿಯಾಗುವಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಮಾರಂಭದ ಮುಖ್ಯ ಅತಿಥಿಗಳಾದ ಅಬ್ದುಲ್ ರಝಾಕ್ ಅನಂತಾಡಿ ಮಾರ್ಗದರ್ಶನ ನೀಡಿದರು..

ವಿದ್ಯಾರ್ಥಿಗಳು ಕನ್ನಡ ನಾಡಿನ ಸೊಬಗನ್ನು ಸಾಮೂಹಿಕ ಗೀತೆ ಹಾಗೂ ಸಾಮೂಹಿಕ ನೃತ್ಯರೂಪಕದ ಮೂಲಕ ಪ್ರಸ್ತುತಪಡಿಸಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಗಳಿಂದ ಬಹುಮಾನವನ್ನು ವಿತರಿಸಲಾಯಿತು

ಈ ಕಾರ್ಯಕ್ರಮವನ್ನು ಸಹಶಿಕ್ಷಕಿಯರಾದ ನಿಶ್ಮಿತಾ ಕುಮಾರಿ ಹಾಗೂ ಪ್ರಿಯಾಂಕ ಗಟ್ಟಿರವರ ಮಾರ್ಗದರ್ಶನದಲ್ಲಿ ಕು. ಆಯಿಷಾ ಸ್ವಿದ್ವೀಕಾ ನಿರೂಪಿಸಿ, ಕು. ಫಾತೀಮ ಶಮ್ರಾ ಸ್ವಾಗತಿಸಿ, ಕು. ರಿಫ್ಕಾ ಫಾತೀಮ ವಂದಿಸಿದರು.