February 4, 2026
IMG-20260102-WA0005


​ಮಂಗಳೂರು: ಕಳೆದ ಹತ್ತು ವರ್ಷಗಳಿಂದ ಸಮಾಜದ ಹಿತಕ್ಕಾಗಿ ಶ್ರಮಿಸತ್ತಿರುವ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ತನ್ನ 10ನೇ ವರ್ಷದ ಸಂಭ್ರಮದಲ್ಲಿದೆ. ಈ ಸುಸಂದರ್ಭದ ಅಂಗವಾಗಿ ಜಿಲ್ಲೆಯಲ್ಲೇ ಹಿಂದೆಂದೂ ಕಂಡಿರದ ರೀತಿಯಲ್ಲಿ ಬೃಹತ್ ‘ಕಿರಾತ್’ ಸೀಸನ್-4 (ಕುರ್‌ಆನ್ ಪಠಣ) ಸ್ಪರ್ಧೆಯನ್ನು2026ರ ಜನವರಿ 28ರ ಬುಧವಾರದಂದು ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಅನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ. ಯು.ಟಿ. ಖಾದರ್ ಅವರು ದಿನಾಂಕ 01/01/2025 ರಂದು ಅನಾವರಣಗೊಳಿಸಿದರು.


ಈ ಸ್ಪರ್ಧೆಯ ಮೊದಲ ಮೂರು ಸೀಸನ್‌ಗಳು ಸೌದಿ ಅರೇಬಿಯಾದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದವು. ಇದೀಗ ನಾಲ್ಕನೇ ಸೀಸನ್ ಅನ್ನು ನಮ್ಮ ಮಂಗಳೂರಿನಲ್ಲಿ ಆಯೋಜಿಸಲು ಟ್ರಸ್ಟ್ ನಿರ್ಧರಿಸಿದೆ. ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಡಾ. ಯು.ಟಿ. ಖಾದರ್ ಅವರು, ಟ್ರಸ್ಟ್‌ನ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿ, ಕಾರ್ಯಕ್ರಮಕ್ಕೆ ಪೂರ್ಣ ಯಶಸ್ಸು ಸಿಗಲಿ ಎಂದು ಹಾರೈಸಿದರು.