ಮಂಗಳೂರು:ಮಂಗಳೂರಿನ ಹೊರವಲಯದ ಬಜಪೆ ಕಿನ್ನಿಪದವು ಸಮೀಪದಲ್ಲಿ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮೇಲೆ ತಲವಾರು ದಾಳಿ ನಡೆದಿದ್ದು, ಆತ ಅಧಿಕ ರಕ್ತಸ್ತ್ರಾವಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೂ ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸುಹಾಸ್ ಶೆಟ್ಟಿಯನ್ನೂ ಮಂಗಳೂರಿನ ಬಜಪೆ ಕಿನ್ನಿಪದವು ಸಮೀಪ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ಸುವಾಸ್ ಶೆಟ್ಟಯನ್ನು ಮೀನಿನ ಟೆಂಪೋ ಹಾಗೂ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳ ತಂಡ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಸುಹಾಸ್ ಶೆಟ್ಟಿ 2022ರಲ್ಲಿ ಫಾಜಿಲ್ ಮರ್ಡರ್ ಕೇಸ್ ಸೇರಿದಂತೆ ಇತರೆ ಕೇಸ್‌ಗಳಲ್ಲಿ ಆರೋಪಿಯಾಗಿದ್ದನು. ಆತನ ವಿರುದ್ಧ 5 ಕೇಸ್‌ಗಳಿದ್ದು, 1 ವರ್ಷದ ಹಿಂದೆ ಬೇಲ್ ಪಡೆದುಕೊಂಡು ಹೊರ ಬಂದಿದ್ದನು. ಸದ್ಯ ನಾವು ಮೂರ್ನಾಲ್ಕು ಪೊಲೀಸರ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದೇವೆ. ಸದ್ಯ ಅವರ ಸ್ನೇಹಿತ ಒಬ್ಬನಿಗೂ ಗಾಯವಾಗಿದ್ದು, ಆತನನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲ ಮಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
