February 4, 2026
IMG-20250502-WA0052

ಮಂಗಳೂರು : ಕಳೆದ ಕೆಲವು ಸಮಯಗಳಿಂದ ದಕ್ಷಿಣ ಕನ್ನಡ ಜಿಲ್ಲೆಯು ಅಲ್ಲಿಂದಲ್ಲಿಗೆ ಶಾಂತಿಯು ನೆಲೆಸಿತ್ತು ನಿನ್ನೆ ಬಜಪೆಯ ಕಿನ್ನಿಪದವು ಎಂಬಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಖಂಡನೀಯವಾಗಿದೆ

ವಾಮಂಜೂರು ಬಳಿಯ ಕುಡುಪು ಎಂಬಲ್ಲಿ
ಮಾನಸಿಕ ಅಸ್ವಸ್ಥ , ಅಮಾಯಕ ಕಾರ್ಮಿಕ ಕೇರಳ ಮೂಲದ ಅಶ್ರಫ್ ಎಂಬಾತನನ್ನು ಸುಮಾರು 30 40 ಸಂಘೀ ಗೂಂಡಾಗಳು ವಿನಾಕಾರಣ ಹಾಡು ಹಾಗಲೇ ಹತ್ಯೆ ಮಾಡಿ ಅಲ್ಲದೆ ಇಂತಹ ದುರ್ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಸಂಘೀ ಮನಸ್ಥಿತಿಯ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಗೃಹ ಸಚಿವರಾದ ಜಿ.ಪರಮೇಶ್ವರ ಅವರ ಬೇಜವಾಬ್ದಾರಿ ಹೇಳಿಕೆಯೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಕ್ರಿಯೆಗೆ ಪ್ರತಿಕ್ರಿಯೆ ಎಂಬ ಸಂಘಿಗಳ ಘೋಷಣೆ ಎಂಬಂತೆ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯುತ್ತಿದ್ದು ಈಗಾಗಲೇ ಬಹಿರಂಗ ಸವಾಲೊಡ್ಡುತ್ತಿರುವ ಕೋಮುವಾದಿಗಳ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಅಪ್ಪಟ ಜಾತ್ಯತೀತ ಎಂಬ ಮುಖವಾಡ ಹೊಂದಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರಾಜೀನಾಮೆ ಪಡೆದು ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸಲಿ ಇಲ್ಲವಾಗಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ ಕೆಲವು ಮಾಧ್ಯಮಗಳು ತುಪ್ಪ ಸುರಿತ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆರಡಿಸಲಿದೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ
ಹಾರೂನ್ ರಶೀದ್ ಬಂಟ್ವಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ