February 4, 2026
IMG-20240802-WA0043


ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ನೆರೆ, ಸಾಕಷ್ಟು ಹಾನಿ ಉಂಟಾಗಿದೆ. ಈ ಹಿನ್ನೆಲೆ ಹಾನಿ ಪ್ರದೇಶಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.
ಇಂದು ಬೆಳಗ್ಗೆ ಬಂಟ್ವಾಳ ಪ್ರದೇಶದಲ್ಲಿ ಹಾನಿಯಾಗಿದ್ದ ಸ್ಥಳಗಳಿಗೆ ದಿನೇಶ್ ಗುಂಡು ರಾವ್ ಮತ್ತು ಮಾಜಿ ಸಚಿವರಾದ ರಮಾನಾಥ ರೈ ಭೇಟಿ ನೀಡಿದರು.

ಗೂಡಿನಬಳಿ, ಪಾಣೆಮಂಗಳೂರು ಅಲಡ್ಕ ಪ್ರದೇಶಕ್ಕೆ ನೀಡಿ ಸಂಬಂಧಪಟ್ಟ ಅಧಿಕಾರಿಗಳ ಜೋತೆ ಪರಿಶೀಲನೆ ನಡೆಸಿದರು.
ನಮ್ಮ ಕೃಷಿ ಭೂಮಿಗೆ‌ ಹಾನಿ ಆಗಿದೆ. ಮನೆಯೆಲ್ಲಾ ಮುಳುಗಡೆ ಆಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.