February 4, 2026
IMG-20250503-WA0037

ಬಂಟ್ವಾಳ : ಪುರಸಭೆ ವ್ಯಾಪ್ತಿಯ ವಾರ್ಡ್ ನಂ 8 ರ ಕೆಳಗಿನ ಪೇಟೆಯ ಬಸ್ತಿಪಡ್ಪು ಬಳಿಯ ಚಾರ್ಲ್ ಹಿತ್ತಲು ಎಂಬಲ್ಲಿ ಕೊಳಚೆ ನೀರೆಲ್ಲ ಚರಂಡಿಯಲ್ಲಿ ಸಂಗ್ರಹವಾಗಿ ಮನೆ ಅಂಗಳದಲ್ಲಿ ಹರಿಯುತ್ತಿದು ಸೊಳ್ಳೆಗಳ ಕಾಟ ಹಾಗೂ ದುರ್ವಾಸನೆಯಿಂದ ಗ್ರಾಮದ ಜನ ನರಕಯಾತನೆ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಹಲವು ಬಾರಿ ಪುರಸಭೆಯ ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಊರಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಒಳಚರಂಡಿಯಲ್ಲಿ ಕೊಳಚೆ ನೀರು ತುಂಬಿ ತಳುಕುತ್ತಿದ್ದು ಮನೆಯ ಹೊರಗೆ ದುರ್ವಾಸನೆ ಸಹಿಸಲಾಗದೆ ಹಲವು ಕುಟುಂಬಗಳು ಸಾಂಕ್ರಾಮಿಕ ರೋಗ ಬರುವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.

ಮಳೆಗಾಲ ಸಮೀಪವಾಗಿದ್ದು ಇನ್ನಷ್ಟು ಅನಾಹುತ ಆಗುವ ಮುಂಚೆ ಸಮಸ್ಯೆಗೆ ಸೂಕ್ತ ಪರಿಹಾರವಾಗದಿದ್ದಲ್ಲಿ ಗ್ರಾಮದ ಜನರು ಒಟ್ಟು ಸೇರಿ ಬಂಟ್ವಾಳ ಪುರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಇನ್ನು ನಮ್ಮ ಸಮಸ್ಯೆಯ ಬಗ್ಗೆ ಬಂಟ್ವಾಳ ಪುರಸಭೆಯ ಕೌನ್ಸಿಲರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ