March 22, 2026
IMG-20260109-WA0043

ಬಂಟ್ವಾಳ: NINE EAST ಪ್ರಯೋಜಕತ್ವದಲ್ಲಿ ಹಾಗೂ ನ್ಯೂಸ್ 7 ಸಹಯೋಗದಲ್ಲಿ ಇದೇ ಫೆ.9,10 ರಂದು ಅಂಡರ್ ಆರ್ಮ್ ಡೇ ಕ್ರಿಕೆಟ್ ಟೂರ್ನಮೆಂಟ್ ಬಂಟ್ವಾಳ ತಾಲೂಕಿನ ಮೇಲಂತ ಮೈದಾನ ಬಸ್ತಿಪಡ್ಪು ಎಂಬಲ್ಲಿ ನಡೆಯಲಿದೆ.

ಇದೇ ಮೊದಲ ಬಾರಿಗೆ NINE EAST ಪ್ರಯೋಜಕತ್ವದಲ್ಲಿ ಅಂಡರ್ ಆರ್ಮ್ ಡೇ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಅಂದು ಸನ್ಮಾನ ಹಾಗೂ ಬಡ ರೋಗಿಗಳಿಗೆ ಕಿಟ್ ವಿತರಣೆ ಕಾರ್ಯಕ್ರಮ ಜರುಗಲಿದೆ.

ಪ್ರಥಮ ಬಹುಮಾನ 80,001 ಹಾಗೂ ಟ್ರೋಫಿ ಮತ್ತು ದ್ವೀತಿಯ ಬಹುಮಾನ 40,001 ಹಾಗೂ ಟ್ರೋಫಿ ನೀಡಲಾಗುವುದು ಎಲ್ಲಾ ಆಟಗಾರರು ಹಾಗೂ ಬೆಂಬಲಿಗರು ಬಂದು ಕ್ರೀಡೆಗೆ ಪ್ರೋತ್ಸಹಿಸಬೇಕೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.