ಮಂಗಳೂರು: ದೇಶದ ವಿವಿಧ ಭಾಗಗಳಲ್ಲಿ ತನ್ನ ಸುಸ್ವಾದ ಸಿಹಿತಿನಿಸುಗಳ ಮೂಲಕ ಜನರ ಮನಸ್ಸು ಗೆದ್ದು, ವ್ಯಾಪಕ ಪ್ರಚಾರ ಪಡೆದಿರುವ ಪ್ರಸಿದ್ಧ ಸಿಹಿ ಮಳಿಗೆ ‘ ಬಿ ಅಲಬಾನ್’ ಇದೀಗ ಮಂಗಳೂರಿನ ತಲಪಾಡಿಯಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಲು ಸಜ್ಜಾಗಿದೆ. ಈ ಹೊಸ ಶಾಖೆಯ ಉದ್ಘಾಟನೆ ಅತೀ ಶೀಘ್ರದಲ್ಲಿ ನಡೆಯಲಿದ್ದು, ಸ್ಥಳೀಯ ಸಿಹಿಪ್ರಿಯರಿಗೆ ಹೊಸ ಸಂಭ್ರಮ ತರುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಮಳಿಗೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸ್ಪೀಕರ್ ಯು.ಟಿ. ಖಾದರ್ ಅವರು ನಡೆಸಿದರು. ಸಿಹಿತಿನಿಸುಗಳ ಮೂಲಕ ಸಾಂಪ್ರದಾಯಿಕ ರುಚಿಗಳನ್ನು ಆಧುನಿಕ ಶೈಲಿಯಲ್ಲಿ ಪರಿಚಯಿಸುವ ಈ ಮಳಿಗೆಯ ಪ್ರಯತ್ನವನ್ನು ಅವರು ಪ್ರಶಂಸಿಸಿದರು.

‘ ಬಿ ಅಲಬಾನ್’ ಬ್ರ್ಯಾಂಡ್ ದೇಶದ ಪ್ರಮುಖ ನಗರಗಳಾದ ಪಂಜಾಬ್, ಕೇರಳದ ಕೊಚ್ಚಿ, ಕಣ್ಣೂರು ,ವಡಗರ, ಮುಝಪ್ಪನಂಙಾಡ್ ( ಡ್ರೈವ್- ಇನ್- ಬೀಚ್ ) ಮುಂತಾದ ಕಡೆಗಳಲ್ಲಿ ಈಗಾಗಲೇ ತನ್ನ ಶಾಖೆಗಳನ್ನು ಹೊಂದಿದ್ದು, ಸಾಂಪ್ರದಾಯಿಕ ಈಜಿಪ್ಟಿನ ಸಿಹಿಗಳಾದ ಸಲಂಕಾಟಿಯ, ಕೌಶ್ರಿ, ಹಬ ಕೇಕ್, ಚೀಝ್ ಪಾಂಬ್ ದುಬಾಯಿ, ಬ್ರೌನಿ ಲಬಾನ್ , ಖಷ್ಟೊಟ, ಕುನಾಫ ನಟ್ ಬಾಕ್ಸ್ , ಕೊಶಾರಿ , ಮೋಲ್ಟನ್ ಹಾಟ್ ಚಾಕೊಲೇಟ್ ಮುಂತಾದವುಗಳನ್ನು ನೀಡುತ್ತದೆ. ಗುಣಮಟ್ಟದ ಕಚ್ಚಾ ವಸ್ತುಗಳ ಬಳಕೆ ಮತ್ತು ಹೈಜೀನಿಕ್ ಪ್ರಕ್ರಿಯೆಗಳಿಂದಾಗಿ ಇದು ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಆಗಿ ಬೆಳೆದಿದೆ. ಮಂಗಳೂರಿನ ತಲಪಾಡಿ ಪ್ರದೇಶದಲ್ಲಿ ತೆರೆಯಲಿರುವ ಈ ಹೊಸ ಶಾಖೆ, ಸ್ಥಳೀಯರಿಗೆ ಸುಲಭವಾಗಿ ಲಭ್ಯವಾಗುವಂತೆ ವಿನ್ಯಾಸಿಸಲಾಗಿದ್ದು, ಹಬ್ಬ-ಹರಿದಿನಗಳಲ್ಲಿ ವಿಶೇಷ ಆಫರ್‌ಗಳನ್ನು ನೀಡುವ ನಿರೀಕ್ಷೆಯಿದೆ.
ಈ ಉದ್ಘಾಟನೆಯ ಮೂಲಕ ಮಂಗಳೂರು ಪ್ರದೇಶದಲ್ಲಿ ಸಿಹಿ ಮಾರುಕಟ್ಟೆಗೆ ಹೊಸ ಉತ್ತೇಜನ ಸಿಗಲಿದ್ದು, ಸ್ಥಳೀಯ ಉದ್ಯಮಿಗಳು ಮತ್ತು ಗ್ರಾಹಕರು ಇದನ್ನು ಸ್ವಾಗತಿಸಿದ್ದಾರೆ.
