March 22, 2026

ವಿಟ್ಲ: ಭಾರೀ ಸ್ಫೋಟ ಸಂಭವಿಸಿ, ವಿಟ್ಲ ಸುತ್ತಮುತ್ತಲು 3-4 ಕಿ.ಮೀ. ವ್ಯಾಪ್ತಿಯ ಜನತೆ ಬೆಚ್ಚಿ ಬಿದ್ದ ಘಟನೆ ಮಾ.4ರ ಮಂಗಳವಾರ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ನಡೆದಿದೆ.

ಹಲವು ಮಂದಿ ಭೂಕಂಪನ ಸಂಭವಿಸಿರಬಹುದೆಂದು ಊಹಿಸಿದ್ದರು. ಆದರೆ ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಕಲ್ಲು ಸ್ಫೋಟಿಸುವ ಸ್ಫೋಟಕ ಒಮ್ಮೆಲೇ ಸ್ಫೋಟಗೊಂಡಿದೆ ಎನ್ನಲಾಗಿದೆ.

ಘಟನೆಯ ಪರಿಣಾಮ ಯಾವುದೇ ಪ್ರಾಣ ಹಾನಿ ಹಾಗೂ ಇನ್ನಿತರ ಅನಾಹುತಗಳು ನಡೆದಿಲ್ಲ.