February 4, 2026
Wayanad (4)

ವಯನಾಡ್:‌ ಕೇರಳದ ವಯನಾಡ್‌ ಜಿಲ್ಲೆಯು ಗುಡ್ಡ ಕುಸಿತದ ಕಾರಣದಿಂದ ನಲುಗಿ ಹೋಗಿದೆ. ಹಲವಾರು ಜನರು ತಮ್ಮ ಮನೆಗಳನ್ನು ತೊರೆದು ನಿರಾಶ್ರಿತ ಕೇಂದ್ರಗಳಲ್ಲಿ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವು ಊರುಗಳಲ್ಲಿ ಮಣ್ಣು, ನೀರು ತುಂಬಿದ್ದು ಜನಜೀವನ ಸಹಜತೆಗೆ ಬರಲು ಇನ್ನಷ್ಟು ದಿನ ಬೇಕಾಗಿದೆ. ಇದೇ ವೇಳೆ ಖಾಲಿ ಇರುವ ಮನೆಗಳಲ್ಲಿ ಕಳ್ಳತನ ನಡೆಯುತ್ತಿದೆ ಎಂಬ ಬಗ್ಗೆ ವರದಿಯಾಗಿದೆ.

ತಾವು ಬಿಟ್ಟು ಬಂದಿರುವ ಮನೆಗಳಲ್ಲಿ ಕಳ್ಳತನ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸ್ಥಳಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳ್ಳರು ಈ ಬಿಕ್ಕಟ್ಟಿನ ಲಾಭವನ್ನು ಪಡೆದು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ ಎಂದು ಸ್ಥಳಾಂತರಗೊಂಡ ನಿವಾಸಿಗಳು ಆತಂಕ ಹೊರಹಾಕಿದ್ದಾರೆ.
ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಸಂತ್ರಸ್ತ ಕೆಲವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.