February 4, 2026
IMG-20251003-WA0137

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಧೀಶರಾಗಿ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ದಿವಂಗತ ಕೆ.ಪಿ ನಾರಾಯಣ ಮಾಸ್ಟರ್ ರವರ ಮಗನಾದ ಪಾವೂರು ತ್ಯಾಗರಾಜ್ ಆಯ್ಕೆಯಾಗಿದ್ದಾರೆ‌

ತ್ಯಾಗರಾಜ್ ಎನ್.ಇನವಳ್ಳಿ ರವರು ಅಧಿಕಾರ ವಹಿಸಿದ ನಂತರ ತನ್ನ ಹುಟ್ಟೂರು ಪಾವೂರು ಕಂಬಳ ಪದವು ಮನೆಗೆ ಬೇಟಿ ನೀಡಿದ ಸಂದರ್ಭದ ಸುದ್ದಿ ತಿಳಿದ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ಮೋನು ರವರು ಜೊತೆಗೂಡಿ ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಹಾಗೂ ಪ್ರಭಾಕರ್ ಶೆಟ್ಟಿ,ವಿವೇಕ್ ರೈ,ವಿನ್ಸಂಟ್ ಲೋಬೊ,ಹನೀಫ್ ಕೆಎಂ ರವರು ಅವರ ನಿವಾಸದಲ್ಲಿ ಭೇಟಿಯಾಗಿ ಪೇಟ ತೊಟ್ಟು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅಣ್ಣನಾದ ಶಂಕರನಾಂದ ಇನವಳ್ಳಿ ರವರು ಉಪಸ್ಥಿತರಿದ್ದರು.