March 22, 2026

ಬಂಟ್ವಾಳ :ಫರಂಗಿಪೇಟೆ, ಮಾ.4: ನಾಪತ್ತೆಯಾದ ವಿದ್ಯಾರ್ಥಿಯನ್ನು ಶೀಘ್ರ ಪತ್ತೆಹಚ್ಚಲು ಮತ್ತು ಈ ಬಗ್ಗೆ ಅನಗತ್ಯ ಪ್ರಚೋದನೆಗೆ ಅವಕಾಶ ನೀಡದಂತೆ ಆಗ್ರಹಿಸಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರನ್ನು ಅಮೆಮ್ಮಾರ್ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು

ಕಾಲೇಜ್ ವಿದ್ಯಾರ್ಥಿ ದಿಗಂತ್ ಫೆಬ್ರವರಿ 25ರ ರಾತ್ರಿಯಿಂದ ಮನೆಯಿಂದ ದೇವಸ್ಥಾನಕ್ಕೆಂದು ಹೊರಟವನು ಕಾಣೆಯಾಗಿ ಇಂದಿಗೆ ಏಳು ದಿವಸವಾಗಿದ್ದು ಈ ಬಗ್ಗೆ ಇಂದಿಗೂ ಯಾವುದೇ ಸುಳಿವು ಸಿಗದಿರುವ ಬಗ್ಗೆ ಕುಟುಂಬ ಮತ್ತು ನಾಗರಿಕರು ನೋವು ಮತ್ತು ಆತಂಕದಲ್ಲಿದ್ದಾರೆ ಈ ಹಿನ್ನಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದಿರುವ ಫರಂಗಿಪೇಟೆ ಮತ್ತು ಆಸುಪಾಸಿನ ಊರಿನ ಜನರನ್ನು ಈ ಹಿಂದಿನ ಕಹಿ ಘಟನೆಯನ್ನು ಮೆಲುಕು ಹಾಕಿ ಹಾಗೂ ಮಹಿಳೆಯರು ರಾತ್ರಿ ನಡೆದಾಡಲು ಭಯವಾಗುತ್ತಿದೆ ಎಂಬ ಸತ್ಯಕ್ಕೆ ದೂರವಾದ ಪ್ರಚೋದನೆಯ ಹೇಳಿಕೆಗಳಿಂದ ನಾಗರಿಕ ಸಮಾಜದಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ಸ್ರಷ್ಟಿಸುತ್ತಿರುವೂದು ಖಂಡನೀಯವಾಗಿದೆ ಈ ಬಗ್ಗೆ ಯಾವುದೇ ಪ್ರಚೋದನೆಗೆ ಅವಕಾಶ ನೀಡದಂತೆ ಹಾಗೂ ನಾಪತ್ತೆಯಾದ ಬಾಲಕನನ್ನು ಶೀಘ್ರ ಪತ್ತೆ ಹಚ್ಚಿ ನೋವಿನಲ್ಲಿರುವ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು,
ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡದೇ ಇದ್ದರೂ ಟಿವಿ ಚಾನೆಲ್ ನಲ್ಲಿ ಅನ್ಯಮತೀಯರು ಎಂದು ಸುದ್ದಿ ವಿಶ್ಲೇಷಣೆ ಬಿತ್ತರಿಸುತ್ತಿದ್ದು ಈ ಆಧಾರ ರಹಿತವಾದ ಉಹಾಪೋಹಗಳಿಗೆ ಕಡಿವಾಣ ಹಾಕಬೇಕು ಎಂದು ನಿಯೋಗ ಮನವಿ ಪತ್ರದಲ್ಲಿ ಆಗ್ರಹಿಸಿತು

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಸ್ವಾಲಿಹ್ ಉಸ್ತಾದ್, ಪ್ರಧಾನ ಕಾರ್ಯದರ್ಶಿ ಶಾಫಿ ಅಮೆಮ್ಮಾರ್, ಕಾರ್ಯದರ್ಶಿ ಹೈದರ್ ಅಮೆಮ್ಮಾರ್, ಬಶೀರ್ ತಂಡೇಲ್ ಮತ್ತಿತರರು ನಿಯೋಗದಲ್ಲಿದ್ದರು
ಬಾಲಕ ನಾಪತ್ತೆಯಾದ ದಿನದಿಂದಲೇ ಈ ಪ್ರಕರಣ ಭೇದಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದೇವೆ ಸುಮಾರು ಏಳು ಸಬ್ ಇನ್ಸ್ ಪೆಕ್ಟರ್ ರವರ ತಂಡವನ್ನು ರಚಿಸಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಾಇದ್ದೇವೆ ಶೀಘ್ರ ಈ ಪ್ರಕರಣವನ್ನು ಬೇದಿಸುವ ಭರವಸೆ ಇದೆ
-ಯತೀಶ್ ಎನ್
ಪೊಲೀಸ್ ವರಿಷ್ಠಾಧಿಕಾರಿ