ಬಂಟ್ವಾಳ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶುಕ್ರವಾರ ಮಸ್ಜಿದ್ – ಎ ಮುತ್ತಲಿಬ್ ಗೂಡಿನಬಳಿ ಹಾಗೂ ಆಡಳಿತ ಕಮಿಟಿ ಸಹಯೋಗದಲ್ಲಿ ಬೃಹತ್ ರ‍್ಯಾಲಿ ನಡೆಯಿತು.

ಮಹಮ್ಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಯು ಗೂಡಿನಬಳಿ ಶಾಲೆ ಮೈದಾನದಿಂದ ಆರಂಭಗೊಂಡು ಬಿ ಸಿ ರೋಡ್ ಸರ್ಕಲ್, ಬಂಟ್ವಾಳ ಕೆಳಗಿನ ಪೇಟೆ ಮೂಲಕ ಸಾಗಿ ಗೂಡಿನಬಳಿ ಮಸೀದಿ ಬಳಿ ತೆರಳಿತು.

ನಾಥ್ ಹಾಗೂ ದರೂದ್ ಪಠಣದೊಂದಿಗೆ ಮೆರವಣಿಗೆ ನಡೆಯಿತು. ಶ್ವೇತ ವಸ್ತ್ರಧಾರಿಗಳಾದ ಯುವ ಜನರು ಧರ್ಮದ ಧ್ವಜಗಳನ್ನು ಹಿಡಿದು ಮಹಮ್ಮದ್ ಪೈಗಂಬರ್ ಪರ ಘೋಷಣೆಗಳನ್ನು ಹಾಕುತ್ತಾ ಸಾಗಿದರು.
