ಮಂಗಳೂರು : ಜೋಕ್ಕಟ್ಟೆ ಹ್ಯೂಮಾನಿಟಿ ಟೀಮ್ ವತಿಯಿಂದ ಇದ್ ಮಿಲಾದ್ ಹಬ್ಬವನ್ನು ಹೃದಯಂಗಮ ಹಾಗೂ ಮಾದರಿಯಾದ ರೀತಿಯಲ್ಲಿ ಜೋಕ್ಕಟ್ಟೆ ಆಚರಿಸಲಾಯಿತು. ಧಾರ್ಮಿಕ-ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡಿದ ಈ ಸಂದರ್ಭದಲ್ಲಿ ಬೇಧಭಾವವಿಲ್ಲದೆ ಎಲ್ಲರಿಗೂ ಸಿಹಿತಿಂಡಿ, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು.

ಈ ಸೇವಾ ಚಟುವಟಿಕೆಯಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ, ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಹ್ಯೂಮಾನಿಟಿ ಟೀಮ್‌ನ ಈ ಮಾನವೀಯ ಕಾರ್ಯಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಯಿತು.

ರಶೀದ್ ಚುನರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶಮೀರ್ ಚಮ್ಮು ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಜೋಕ್ಕಟ್ಟೆ ಸಂಘದ ಅಧ್ಯಕ್ಷರು, ಮಸೀದಿ ಅಧ್ಯಕ್ಷರು, ಮಾಲೀಮುಗಳು ಹಾಗೂ ಗಣ್ಯರು ಭಾಗವಹಿಸಿ ಯುವಕರ ಸೇವಾ ಮನೋಭಾವಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಗಣ್ಯರು, “ಇಂತಹ ಕಾರ್ಯಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಬಾಂಧವ್ಯವನ್ನು ಬಲಪಡಿಸಲು ಮಾದರಿಯಾಗುತ್ತವೆ” ಎಂದು ಅಭಿಪ್ರಾಯಪಟ್ಟರು.

ಜೋಕ್ಕಟ್ಟೆ ಹ್ಯೂಮಾನಿಟಿ ಟೀಮ್ ಮುಂದಿನ ದಿನಗಳಲ್ಲಿ ಸಹ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದೃಢನಿಶ್ಚಯವನ್ನು ವ್ಯಕ್ತಪಡಿಸಿದೆ.
