ಮಂಗಳೂರು: ಲತೀಫ್ ವಳಚೀಲ್ ಅವರ ಪುತ್ರಿ ಹಾಗೂ ಇಮ್ರಾನ್ ಚಿಕ್ಕಮಗಳೂರು ರವರ ಧರ್ಮ ಪತ್ನಿ ವೈದ್ಯೆ ನಝ್ನೀನ್ ಫಾತಿಮಾ ಅಲ್ಪಕಾಲದ ಆನಾರೋಗ್ಯದಿಂದ ನಿಧನರಾದರು.

ಜನಾಝವನ್ನು ಹುಟ್ಟೂರಾದ ವಳಚೀಲ್ ತರವಾಟು ಮನೆಗೆ ತಂದಿದ್ದು, ಜನಾಝ ಬೆಳಿಗ್ಗೆ ವಳಚೀಲ್ ಕೇಂದ್ರ ಜುಮಾ ಮಸೀದಿಯಲ್ಲಿ ದಫನ ಕಾರ್ಯವೂ ನಡೆಸಲಾಯಿತು. ಕುಟುಂಬ ತಂದೆ ತಾಯಿ.ಗಂಡ,ಇಬ್ಬರು ಸಹೋದರರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ನಝ್ನೀನ್ ಫಾತಿಮಾ ನಿಧನಕ್ಕೆ ಸ್ಪೀಕರ್ ಯುಟಿ ಖಾದರ್, ಯುಟಿ ಇಫ್ತಿಕಾರ್, ಮೊಹಿದ್ದೀನ್ ಬಾವ, ಪದ್ಮರಾಜ್, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಶಾಸಕ ಜಿ ಎಸ್. ಪಾಟೀಲ್, ಇನಾಯತ್ ಅಲಿ ಮುಲ್ಕಿ ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
