ಉಳ್ಳಾಲ : ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿಯ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ದ್ವಿತೀಯ ಬಿ.ಎ ವಿದ್ಯಾರ್ಥಿಯಾದ ತ್ವಯ್ಯಿಬ್ ಸುರಿಬೈಲ್ ಬರೆದಿರುವ ‘ಸಾಮ್ರಾಟ’ ಕಾದಂಬರಿ ದಿನಾಂಕ 6.3.2025 ರಂದು ಬಿಡುಗಡೆಯಾಯಿತು.

ಮಂಗಳೂರಿನ ಪ್ರಸಿದ್ಧ ಪ್ರಕಾಶಕರಾದ ಆಕೃತಿ ಆಶಯ ಪ್ರಕಾಶನದವರು ಪುಸ್ತಕವನ್ನು ಪ್ರಕಟಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರು ಹಾಗೂ ಲೇಖಕರಾದ ಶ್ರೀ ಚಂದ್ರಶೇಖರ ಪಾತೂರು ಅವರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಪ್ರಶಾಂತ್ ಕಾಜವ ಅವರು ಕೃತಿಯ ಪ್ರಥಮ ಪ್ರತಿಯನ್ನು ಸ್ವೀಕರಿಸಿ ಕಾದಂಬರಿಕಾರರಿಗೆ ಅಭಿನಂದನೆಯನ್ನು ಸಲ್ಲಿಸಿದರು. ವಾರ್ತಾ ಭಾರತೀಯ ಪತ್ರಕರ್ತರು ಹಾಗೂ ಲೇಖಕರು ಆಗಿರುವ ಹಂಝ ಮಲಾರ್ ಅವರು ಕಾದಂಬರಿಯನ್ನು ಕುರಿತು ಮಾತನಾಡಿದರು. ಪ್ರಕಾಶಕರಾದ ನಾಗೇಶ್ ಕಲ್ಲೂರ್ ಹಾಗೂ ಇನ್ನೋರ್ವ ಲೇಖಕರಾದ ಇಸ್ಮತ್ ಫಜೀರ್ ಅವರು ಸಾಹಿತ್ಯದ ಮಹತ್ವವನ್ನು ತಿಳಿಸುತ್ತಾ ಲೇಖಕರಿಂದ ಮತ್ತಷ್ಟು ಸಾಹಿತ್ಯ ಸೇವೆ ಸಾಗಬೇಕೆಂದು ಅಭಿನಂದನೆಯ ನುಡಿಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸತೀಶ್ ಗಟ್ಟಿಯವರು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಹೈದರಾಲಿಯವರು ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿದ್ದ ಎಲ್ಲಾ ಗಣ್ಯರು ಕಾದಂಬರಿ ಕಾರರಿಗೆ ಅಭಿನಂದನೆಯನ್ನು ತಿಳಿಸಿ ಪ್ರೋತ್ಸಾಹದಾಯಕ ನುಡಿಗಳನ್ನು ನುಡಿದರು. ಕಾಲೇಜಿನ ಎಲ್ಲ ಭೋದಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಾಹಿರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕು. ತಸ್ರೀನಾ ಅವರು ಎಲ್ಲರಿಗೂ ವಂದಿಸಿದರು.
