February 4, 2026
70f27fafef614dee98632681e33a0cac

ಹಾಸನ : ಎರಡರಿಂದ ಮೂರು ವರ್ಷದ ಮಕ್ಕಳು ಮುದ್ದು ಮುದ್ದಾಗಿ ಮಾತನಾಡುತ್ತ, ಅಪ್ಪ ಅಮ್ಮ ಎಂದು ತೊದಲು ನುಡಿಯಲ್ಲಿಯೇ ಕರೆಯುತ್ತಿದ್ದರೆ ಕೇಳಲು ಖುಷಿಯಾಗುತ್ತದೆ. ಹೀಗಿರುವಾಗ ಹಾಸನ ಜಿಲ್ಲೆಯ ಒಂದು ವರ್ಷ ಎಂಟು ತಿ೦ಗಳ ಮರಿಯಮ್ ಮೀಮ್ ತೌಸೀಫ್ ಊಹೆಗೂ ಮೀರಿದ ದಾಖಲೆ ಬರೆದಿದ್ದಾಳೆ. ತನ್ನ ಸಾಟಿಯಿಲ್ಲದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ತೊದಲು ಮಾತಿನಲ್ಲೇ ಪಟಪಟನೇ ಉತ್ತರ ನೀಡುವ ಈ ಬಾಲಕಿ

ಒಂದು ವರ್ಷ ಎಂಟು ತಿ೦ಗಳ ಪುಟ್ಟ ಪೋರಿ
ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾಳೆ . ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಹೇಶ್ವರಿ ನಗರದ ಮರಿಯಮ್ ಮೀಮ್ ತೌಸೀಫ್ ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾಳೆ. ಮೂಲತಃ ಸಕಲೇಶಪುರ ತಾಲೂಕಿನ ಮಹೇಶ್ವರಿ ನಗರದ ತೌಸೀಫ್ ಹಾಗೂ ಹಲೀಮಾ ಮಶ್ವತ್ ದಂಪತಿ ಪುತ್ರಿ ಮರಿಯಮ್ ಮೀಮ್ ತೌಸೀಫ್ 10 ರಾಷ್ಟ್ರದ ಧ್ವಜದ ಹೆಸರು,13 ಪ್ರಾಣಿಗಳ ಹೆಸರು. ಮತ್ತು 16 ಪಕ್ಷಿಗಳ ಹೆಸರು, 9 ಹೂವುಗಳ ಹೆಸರು, 5 ವಾಹನಗಳ ಹೆಸರು, 13 ದೇಹದ ಅಂಗಾಂಗಗಳ ಹೆಸರು, 16 ತರಕಾರಿಗಳ ಹೆಸರು ಮತ್ತು 14 ಹಣ್ಣುಗಳ ಹೆಸರು ನೆನಪಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾಳೆ.

ಇಷ್ಟೇ ಅಲ್ಲದೇ 10 ವಿವಿಧ ವಸ್ತುಗಳ ಹೆಸರು , ಇಂಗ್ಲಿಷ್ ನರ್ಸರಿ ಪ್ರಾಸಗಳು ಈ ಮಗು ಸುಲಲಿತವಾಗಿ ಹೇಳಬಲ್ಲ. ಒಂದರಿಂದ ಹತ್ತರವರಗೆ ಹೇಳುವ ಕಲೆಯನ್ನೂ ಹೊಂದಿದ್ದಾಳೆ. ತನ್ನ ತೊದಲು ಮಾತಿನಲ್ಲೇ ಪಟಪಟನೇ ಉತ್ತರ ನೀಡುವ ಈ ಬಾಲಕಿ, ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾಳೆ..