ಶ್ರೀ ದುರ್ಗಾ ಫ್ರೆಂಡ್ಸ್ ಮೂಡು ಅಂಜಾರು ಹೀರಿಯಡಕ ಇದರ ವತಿಯಿಂದ 8ನೇ ವರ್ಷದ 40 ಗಜಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರೀಡಾಕೂಟವು ಭಾನುವಾರ ದುರ್ಗಾನಗರ ಬಳಿ ನಡೆಯಿತು.


ಅರ್ಚಕರು, ಶ್ರೀ ಸೀತಾರಾಮ ಆಚಾರ್ಯರು ಕ್ರೀಡಾಕೂಟ ಉದ್ಘಾಟಿಸಿದರು. ಶ್ರೀ ಸುರೇಶ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಶಾಸಕ ಯಶ್ಪಾಲ್. ಎ. ಸುವರ್ಣ, ಶ್ರೀ ಉದಯಕುಮಾರ್ ಶೆಟ್ಟಿ. ರಮೇಶ್ ಕಾಂಚನ್, ಶ್ರೀ ಸಂತೋಷ್ ಕುಲಾಲ್ ಶುಭ ಹಾರೈಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸುಂದರ್ ನೂಕಲ ಈಕ್ವಿರಸ್ ಸಂಪತ್ತು ನಿರ್ವಹಣೆಯ ನಿರ್ದೇಶಕರು ವಿಜೇತರಿಗೆ ಬಹುಮಾನ ವಿತರಿಸಿದರು. ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸತ್ಯಾನಂದ ನಾಯಕ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕೊಡಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಿನಯ್ ಪೂಜಾರಿ, ಅಚ್ಚುತ ಯಾನೆ ಬೊಗ್ಗು ಪಡು ಅಂಜಾರು ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ರಿಯಲ್ ಪೈಟರ್ಸ್ ಫ್ರೆಂಡ್ಸ್ ಗಿಳಿಯಾರ್ ತಂಡ ಪ್ರಥಮ ಪ್ರಶಸ್ತಿ ಹಾಗೂ
ಪಾಂಚಜನ್ಯ ಕೋಟ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
