ಮೈಸೂರು: ಯುವಕನೋರ್ವ ಮುಸ್ಲಿಮ್ ಸಮುದಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಗಿ ಪ್ರತಿಭಟನೆ ನಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಘಟನೆ ಕುರಿತು ಉದಯಗಿರಿ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ಸುರೇಶ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ನಿನ್ನೆಯ ಗಲಾಟೆ ಹಿಂದೆ ಬಿಜೆಪಿ-ಆರ್‌ಎಸ್‌ಎಸ್ ಕೈವಾಡ ಇದೆ. ವೇಶ ಬದಲಾಯಿಸಿಕೊಂಡು ಗುಂಪಿನ ಜೊತೆ ಸೇರಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕಾಗಿ 300 ಜನ ಆರ್ ಎಸ್ಎ ಸ್‌ನವರು ಮೈಸೂರಿಗೆ ಬಂದಿದ್ದಾರೆ. ಯಾರು ಕಲ್ಲು ತೂರಾಟ ಮಾಡಿದ್ದಾರೆ ಕಂಡಲ್ಲಿ ಗೂಂಡು ಹಾರಿಸಬೇಕು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಪ್ರಕರಣದ ಹಿಂದೆ ಇರೋದು ಮಾಜಿ ಸಂಸದ ಪ್ರತಾಪ ಸಿಂಹ, ಆ ಬ್ಲಡಿ ಪ್ರತಾಪ್ ಸಿಂಹನನ್ನ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.
ಈ ಗಲಾಟೆ ಹಿಂದೆ ಇರೋದು ನಮ್ಮವರೇ ಆದರೂ ಅಷ್ಟೇ, ಯಾರೇ ಆದರೂ ಅಷ್ಟೇ. ಶಿಕ್ಷೆ ಆಗಬೇಕು. ಆದ್ರೆ ಈ ಪ್ರತಾಪ ಸಿಂಹ ಓಡಿ ಹೋಗುವ ಮುನ್ನ ಈ ಕೂಡಲೇ ಬಂಧಿಸಬೇಕು ಎಂದು ಹೇಳಿದ್ದಾರೆ.
