ಮಂಗಳೂರು: ಬಸ್ ನಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ವಾಪಸ್ಸು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರಿನಿಂದ ಕಾರ್ಕಳಕ್ಕೆ ಸಂಚರಿಸುವ ನಿಶ್ಮಿತಾ ಬಸ್ ನ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದು ಗಮನ ಸೆಳೆದಿದ್ದಾರೆ.

ರೇಖಾ ಎಂಬರಿಗೆ ಸೇರಿದ ಚಿನ್ನ ಹಾಗೂ ಪರ್ಸ್ ಬಸ್ ಒಳಗೆ ಬಿದ್ದಿತ್ತು, ಅದರಲ್ಲಿ ಅವರಿಗೆ ಬೇಕಾದ ಅಗತ್ಯ ದಾಖಲೆ ಕೂಡ ಇತ್ತು. ಇದನ್ನು ಗಮನಿಸಿದ ಚಾಲಕ ಹೈದರ್ ಮತ್ತು ನಿರ್ವಾಹಕ ನಿಸಾರ್ ಪರ್ಸ್ ನಲ್ಲಿದ್ದ ದಾಖಲೆ ಪರಿಶೀಲನೆ ನಡೆಸಿ ರೇಖಾ ಅವರಿಗೆ ಕರೆ ಮಾಡಿದ್ದಾರೆ. ವಾರೀಸುದಾರರಿಗೆ ಚಿನ್ನ ಹಾಗೂ ಪರ್ಸ್ ಹಸ್ತಾಂತರಿಸುವ ಮೂಲಕ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
