February 4, 2026
BTW_JUNE3_1A-scaled

module: a; hw-remosaic: 0; touch: (0.3, 0.3); modeInfo: ; sceneMode: Auto; cct_value: 0; AI_Scene: (-1, -1); aec_lux: 138.0; hist255: 0.0; hist252~255: 0.0; hist0~25: 0.0;

ಬಂಟ್ವಾಳ: ಬ್ರಿಟಿಷರ ಕಾಲದಿಂದಲು ಸಂಚರಿಸುತ್ತಿರುವ ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆಯು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನಲೆಯಲ್ಲಿ ಹಳೆ ಸೇತುವೆಯಲ್ಲಿ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸುವಂತೆ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್ ರವರು ಆದೇಶಿಸಿದ್ದಾರೆ.

ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಮಾಡಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಘನ ವಾಹನಗಳ ಸಂಚಾರ ನಿಷೇಧ ಹೇರಿದ್ದ ಜಿಲ್ಲಾಡಳಿತ

ಪಾಣೆಮಂಗಳೂರು ಉಕ್ಕಿನ ಸೇತುವೆ ಉಳಿಸುವ ಮತ್ತು ದುರ್ಬಲ ಸೇತುವೆ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಜಿಲ್ಲಾಡಳಿತ ಅದೇಶ ಹೊರಡಿಸಿ, ಸುಮಾರು ವರ್ಷಗಳ ಬಳಿಕ ಸೇತುವೆಯ ಎರಡು ಭಾಗಗಳಲ್ಲಿ ಕಬ್ಬಿಣದ ಕಮಾನ್ ಅಳವಡಿಸಲಾಗಿತ್ತು.

ಅದಾದ ಬಳಿಕ ಕಬ್ಬಿಣದ ಕಮಾನ್ ಗಳನ್ನು ಮರಳು ವಾಹನ ಸಾಗಾಟ ಮಾಡುವ ವಾಹನಗಳು ತೆಗೆದು ಸಂಚಾರ ಮಾಡುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ, ಅತ್ಯಂತ ಹೆಚ್ಚು ತೂಕದ ಕಬ್ಬಿಣದ ಕಂಬಗಳನ್ನು ಅಳವಡಿಸಿ ಅದರ ಮೇಲೆ ಅಷ್ಟೇ ತೂಕದ ಕಮಾನ್ ಗಳನ್ನು ಹಾಕಲಾಗಿತ್ತು.

ಆದರೆ ಕೆಲ ತಿಂಗಳ ಹಿಂದೆ ಬಿಸಿರೋಡಿನಿಂದ ಅತೀ ವೇಗದಿಂದ ಬಂದ ಮಸಾಲೆ ಲೈನ್ ಸೇಲ್ ವಾಹನವೊಂದು ಇದರಲ್ಲಿ ಸಿಲುಕಿಕೊಂಡಿತ್ತು.‌ ಸಿಲುಕಿಕೊಂಡ ವಾಹನವನ್ನು ಹರಸಾಹಸ ಪಟ್ಟು ತೆಗೆಯಲಾಗಿತ್ತು.ಮತ್ತು ಕಮಾನ್ ಅರ್ಧ ವೃತ್ತಾಕಾರದಲ್ಲಿ ವಾಲಿಕೊಂಡಿತ್ತು ಆದರೆ ಇದೀಗ ಒಂದು ಭಾಗದಲ್ಲಿ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಕೆಳಗೆ ಬಿದ್ದಿದೆ.