December 22, 2024
IMG-20241211-WA0005

ಕಾರವಾರ: ಅಂಕೋಲ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತ ಹತ್ತಾರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಆದರೆ ದುರಂತದಲ್ಲಿ ಕಣ್ಮರೆಯಾದ ಇಬ್ಬರ ಶವ ಈವರೆಗೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ಎಂದೋ ಸ್ಥಗಿತಗೊಂಡಿದೆ. ಆದರೆ, ಅವರ ಕುಟುಂಬದವರಿಗೆ ಮರಣ ಪತ್ರವನ್ನೇ ಇನ್ನೂ ನೀಡಲಾಗಿಲ್ಲ. ಹೀಗಾಗಿ ಕುಟುಂಬದವರು, ಒಂದೋ ಮರಣ ಪತ್ರ ಕೊಡಿ ಅಥವಾ ಕಾರ್ಯಾಚರಣೆ ಮುಂದುವರೆಸಿ ಎಂದು ಪಟ್ಟು ಹಿಡಿದಿದ್ದಾರೆ.ಶಿರೂರಿನಲ್ಲಿ ಭೂಕುಸಿತ ಸಂಭವಿಸಿ ತಿಂಗಳೇ ಕಳೆದು ಹೋಗಿವೆ. ಈವರೆಗೆ 9 ಜನರ ಶವಗಳನ್ನು ಹೊರತೆಗೆಯಲಾಗಿದೆ. ಆದರೆ ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವವೇ ಪತ್ತೆಯಾಗಿಲ್ಲ. ಸಿಕ್ಕ ಮೂಳೆಗಳಿಗೆ ಹೆಚ್ಚಿನ ರಾಸಾಯನಿಕ ಹಾಕಿದ್ದರಿಂದ ಡಿಎನ್ಎ ಪರೀಕ್ಷಾ ವರದಿ ಸಹ ಬಂದಿಲ್ಲ. ಈ ಮಧ್ಯೆ ಕಾರ್ಯಾಚರಣೆ ಸಂಪೂರ್ಣ ನಿಲ್ಲಿಸಿ ಮೃತ ಕುಂಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಸಹ ನೀಡಲಾಗಿತ್ತು. ಆದರೆ ಜಗನ್ನಾಥ್, ಲೋಕೇಶ್ ಕುಟುಂಬದವರು ನಮ್ಮವರ ಮರಣ ಪತ್ರ ನೀಡಿ ಅಥವಾ ಕಾರ್ಯಾಚರಣೆ ಮುಂದುವರೆಸಿ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಅಂಕೋಲದಲ್ಲಿ ಐಆರ್ಬಿ ಕಂಪನಿ ವಿರುದ್ಧ ದಾಖಲಿಸಿದ ದೂರನ್ನು ಪರಿಗಣಿಸಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *