March 22, 2026

ಮಂಗಳೂರು: ನಗರದ ಪಡೀಲ್ ಬಳಿ ನಂದಿನಿ ಹಾಲಿನ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಸಿಲುಕಿದ ಗಾಯಾಳು ಚಾಲಕನ ನೆರವಿಗೆ ಸ್ಪೀಕರ್ ಯು.ಟಿ ಖಾದರ್ ಧಾವಿಸಿದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಪಡೀಲ್ ರಾಷ್ಟ್ರೀಯ ಹೆದ್ದಾರಿ ಬಳಿ ನಂದಿನಿ ಹಾಲಿನ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಪಡೀಲ್ ಬಳಿ ಸಾಗುತ್ತಿದ್ದ ಯು.ಟಿ ಖಾದರ್ ಇದನ್ನು ಗಮನಿಸಿ ಚಾಲಕನ ನೆರವಿಗೆ ಧಾವಿಸಿದ್ದಾರೆ.

ಅಲ್ಲದೆ, ಅಪಘಾತದಿಂದ ಹೆದ್ದಾರಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸಂಚಾರಕೆ ಅನುವು ಸ್ಪೀಕರ್ ಮಾಡಿಕೊಟ್ಟಿದ್ದಾರೆ.

ಯುಟಿ ಖಾದರ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.