March 22, 2026
IMG-20250712-WA0093

ಮಂಗಳೂರು: ಬಾಲಿವುಡ್​ನ ಕಿಂಗ್ ಖಾನ್ ಶಾರುಖ್ ಖಾನ್ ಶೀಘ್ರದಲ್ಲಿ ಮಂಗಳೂರಿಗೆ ಭೇಟಿ‌ ನೀಡಲಿದ್ದಾರೆ ಎಂದು ರೋಹನ್ ಕಾರ್ಪೊರೇಶನ್ ಮುಖ್ಯಸ್ಥ ರೋಹನ್ ಮೊಂತೇರೊ ಹೇಳಿದ್ದಾರೆ.

ಇಂದು ಭಾರತ್ ಮಾಲ್‌ನಲ್ಲಿ ನಡೆದ ಶಾರೂಖ್ ಖಾನ್ ಬ್ರಾಂಡ್ ಅಂಬಾಸಿಡರ್ ಅಧಿಕೃತ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾರೂಖ್ ಖಾನ್ ಅವರು ಮಂಗಳೂರಿಗೆ ಬರಲು ಬಹಳ ಉತ್ಸುಕರಾಗಿದ್ದಾರೆ. ಶಾರೂಖ್ ಖಾನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲು ಮೊದಲ ಕಾರಣ ಅವರ ಜೀವನ ಹಾಗೂ ಒಂದೇ ರೀತಿ ಇದೆ. ಅವರು ಕೂಡ ತುಂಬಾ ಕಷ್ಟ ಎದುರಿಸಿ ಬಂದವರು ಎಂದು ಹೇಳಿದರು.

ಶಾರೂಖ್ ಖಾನ್ ಅವರಂತಹ ಪ್ರಭಾವಿ ವ್ಯಕ್ತಿತ್ವ ನಮ್ಮ ಜೊತೆಗೆ ಇರುವುದರಿಂದ, ನಮ್ಮ ಯಶಸ್ಸನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವಲ್ಲಿ ಹೊಸ ಆತ್ಮವಿಶ್ವಾಸ ಬಂದಿದೆ. ಇದು ಶಕ್ತಿಯುತ ಸಹಭಾಗಿತ್ವದ ಹೊಸ ಅಧ್ಯಾಯದ ಪ್ರಾರಂಭ ಎಂದರು.

ಈ ಘೋಷಣೆ ಕೇವಲ ಬ್ರಾಂಡ್ ಪ್ರಚಾರವಲ್ಲ, ಇದು ಮಂಗಳೂರಿನ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಸಾಂದರ್ಭಿಕ ಹೆಜ್ಜೆ. 32 ವರ್ಷಗಳ ಅನುಭವ, 5000ಕ್ಕೂ ಹೆಚ್ಚು ಸಂತುಷ್ಟ ಕುಟುಂಬಗಳು, ಮತ್ತು 25ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳೊಂದಿಗೆ, ರೋಹನ್ ಕಾರ್ಪೊರೇಷನ್ ಇದೀಗ ಒಂದು ಜಾಗತಿಕ ಹಾದಿಗೆ ಕಾಲಿಟ್ಟಿದೆ ಎಂದರು.

ಶಾರುಖ್ ಸಹಭಾಗಿತ್ವದಲ್ಲಿ ನಾವು ಕರ್ನಾಟಕ ಹಾಗೂ ಅದರಾಚೆಗೆ ನಗರ ಜೀವನವನ್ನು ಮರು ವ್ಯಾಖ್ಯಾನಿಸುವ ಭರವಸೆಗೆ ಬದ್ಧರಾಗಿದ್ದೇವೆ ಎಂದು ರೋಹನ್ ಮೊಂತೇರೊ ಹೇಳಿದ್ದಾರೆ.

ರೋಹನ್ ಕಾರ್ಪೋರೇಷನ್ ಲಿ. ನಲ್ಲಿ 12 ಚಾಲ್ತಿಯ ಯೋಜನೆ ಹಾಗೂ ಮುಂದಿನ ದಿಗಳಲ್ಲಿ 15 ಯೋಜನೆ ಮಾಡುವ ಉದ್ದೇಶ ಇದೆ. ಮಂಗಳೂರಿ‌ನಲ್ಲಿ ಹೂಡಿಕೆ ಮಾಡಿದ್ರೆ ಅದರ 10ರಷ್ಟು ಹೆಚ್ಚಳವಾಗುತ್ತದೆ. ಮಂಗಳೂರಿಗೆ ಅಂತಾರಾಷ್ಟ್ರೀಯ ಸಂಪರ್ಕ ಇದೆ ಎಂದು ಹೇಳಿದರು.