March 22, 2026
IMG-20250912-WA0033

ಕಡಬ: ಕಡಬ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ತಮನ್ನಾ ಜಮೀನ್ ಹಾಗೂ ಉಪಾಧ್ಯಕ್ಷರಾಗಿ ನೀಲಾವತಿ ಶಿವರಾಂ ಆಯ್ಕೆಯಾಗಿದ್ದಾರೆ.

ಹೊಸದಾಗಿ ರಚನೆಯಾದ ಪಟ್ಟಣ ಪಂಚಾಯತ್ ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಸ್ಥಾನ ಹಾಗೂ ಬಿಜೆಪಿ 5 ಸ್ಥಾನ ಗೆದ್ದುಕೊಂಡಿತ್ತು.

ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಧ್ಯಕ್ಷ ಅಭ್ಯರ್ಥಿ ತಮನ್ನಾ ಜಮೀನ್ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನೀಲಾವತಿ ಶಿವರಾಂ ಮತ್ತು ಬಿಜೆಪಿಯ ಅಧ್ಯಕ್ಷ ಅಭ್ಯರ್ಥಿಯಾಗಿ ಗುಣವತಿ ರಘುರಾಮ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಅಕ್ಷತಾ ಬಾಲಕೃಷ್ಣ ನಾಮಪತ್ರ ಸಲ್ಲಿಸಿದ್ದರು.