March 22, 2026
IMG-20250111-WA0035

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳಗಾವಿ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿದ್ದು ಜಿಲ್ಲಾಧ್ಯಕ್ಷೆಯಾಗಿ ಅಫ್ಸಾನಾ ಸೌದಾಘರ್, ಉಪಾಧ್ಯಕ್ಷೆಯಾಗಿ ಸಾನಿಯಾ ವಾನೂರು, ಪ್ರಧಾನ ಕಾರ್ಯದರ್ಶಿಗಳಾಗಿ ರಿಝ್ವಾನ ಅಖ್ತರ್, ಕಾರ್ಯದರ್ಶಿಯಾಗಿ ನಿಲೋಫರ್ ಪಟ್ವೆಗಾರ್,
ಕೋಶಾಧಿಕಾರಿಯಾಗಿ ಮುನಝ್ಝಾ ಮುಲ್ಲಾ, ಹಾಗೂ ಸಮಿತಿ ಸದಸ್ಯರುಗಳಾಗಿ ಮೆಹಬೂಬ, ಆಸಿಮ ಮುಜಾವರ್,ಸುಮಯ್ಯ ಮಕಂದರ್, ಅಫ್ರೀನಾ ದಫೇದಾರ್ ರವರು ಹಾಜರಾಗಿರುತ್ತಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಸ್ರಿಯಾ ಬೆಳ್ಳಾರೆಯವರು ಪ್ರಸಕ್ತ
ಸನ್ನಿವೇಶದಲ್ಲಿ ಈ ದೇಶದಲ್ಲಿ ನಡೆಯುತ್ತಿರುವ ಮಹಿಳಾದೌರ್ಜನ್ಯಗಳ ವಿರುದ್ಧ ಒಂದುಗೂಡಿ ಹೋರಾಡಿ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಹಾಗೂ ರಾಜಕೀಯವಾಗಿ ಸಬಲೀಕರಣಗೊಳ್ಳಲು ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಉದ್ದೇಶದಿಂದ
ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರಾದ್ಯಂತ ಸಕ್ರಿಯವಾಗಿದೆ ಎಂದು ಸಭೆಯನ್ನುದ್ದೇಷಿಸಿ ಮಾತನಾಡಿದರು.

ಸಭೆಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಮಕ್ಸೂದ್ ಮಕಂದರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು , ಜಾವೇದ್ ಪಟ್ವೇಗಾರ್ ರವರು ಧನ್ಯವಾದಗೈದರು ಹಾಗೂ ರಾಜ್ಯ ಸಮಿತಿ ಸದಸ್ಯೆ ಝುಲೈಕ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.